ರಾಯ್‌ಪುರ (ಛತ್ತೀಸ್‌ಗಢ): ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಛತ್ತೀಸ್‌ಗಢ ರಾಯ್‌ಪುರದ ವಕೀಲರೋರ್ವರನ್ನು ಇಂದು ಬಂಧಿಸಿದ್ದಾರೆ.
ಫೈಜಾನ್ ಖಾನ್ ಬಂಧಿತ ಆರೋಪಿಯಾಗಿದ್ದು, ಅವರನ್ನು ಮುಂಬೈ ಪೊಲೀಸ್ ತಂಡ ಕಸ್ಟಡಿಗೆ ತೆಗೆದುಕೊಂಡಿದೆ. ಬಾಲಿವುಡ್ ಸೂಪರ್ ಸ್ಟಾರ್ಗೆ ಬಂದ ಬೆದರಿಕೆ ಕರೆಯ (ಫೋನ್) ಸಂಖ್ಯೆಯು ಈ ಫೈಜಾನ್ ಖಾನ್ ಹೆಸರಲ್ಲಿ ನೋಂದಾಯಿಸಲ್ಪಟ್ಟಿದೆ. ಇದನ್ನು ಪತ್ತೆ ಹಚ್ಚಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
#WATCH | Raipur, Chhattisgarh: Raipur SSP Santosh Singh says, " a team of bandra police from mumbai reached pandri police station. they have arrested faizan khan in the case of threatening actor shah rukh khan... he was given a notice a few days ago. after the investigation, he… https://t.co/upfy2VY2sT pic.twitter.com/vhLaG4xat7
— ANI (@ANI) November 12, 2024
ಕಳೆದ ವಾರ, ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ಬಾಲಿವುಡ್ ಕಿಂಗ್ ಖಾನ್‌ಗೆ ಬೆದರಿಕೆ ಕರೆ ಬಂದಿತ್ತು. ಘಟನೆ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖಾ ತಂಡ ನವೆಂಬರ್ 7 ರಂದು ರಾಯ್‌ಪುರಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ಫೈಜಾನ್ ಖಾನ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಪ್ರಕಾರ, ಫೈಜಾನ್ ಖಾನ್ನನ್ನು ಪಾಂಡ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ವಿಚಾರಣೆ ಸಂದರ್ಭ, ಫೈಜಾನ್ ಖಾನ್ ಇತ್ತೀಚೆಗೆ ತನ್ನ ಫೋನ್ ಕಳೆದುಹೋಗಿದೆ ಮತ್ತು ನವೆಂಬರ್ 2ರಂದು ರಾಯ್‌ಪುರದ ಖಮರ್ದಿಹ್ ಪೊಲೀಸ್ ಠಾಣೆಯಲ್ಲಿ ಫೋನ್ ಕಾಣೆಯಾಗಿದೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ಪೊಲೀಸರೀಗ ಈ ಹೇಳಿಕೆಯ ಸತ್ಯಾನುಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಬೆದರಿಕೆ ಕರೆ ನೇರವಾಗಿ ಫೈಜಾನ್ ಖಾನ್ ಅವರಿಂದ ಬಂದಿದೆಯೇ ಅಥವಾ ಯಾರಾದರೂ ಅವರ ಫೋನ್ ಬಳಸಿ ಈ ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ತನಿಖೆ ಸಾಗಿದೆ.
ಇದನ್ನೂ ಓದಿ: 'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ
ಮುಂಬೈ ಪೊಲೀಸ್ ಅಧಿಕಾರಿಗಳು ಫೈಜಾನ್ ಕೇಸ್ಗೆ ಸಂಬಂಧಿಸಿದಂತೆ ಟ್ರಾನ್ಸಿಟ್ ರಿಮಾಂಡ್ (ಸ್ಥಳಾಂತರಕ್ಕೆ ಅನುಮತಿ) ಪಡೆಯಲು ರಾಯ್‌ಪುರ ನ್ಯಾಯಾಲಯಕ್ಕೆ ಹಾಜರುಪಡಿಸಲು ಯೋಜಿಸಿದ್ದಾರೆ. ಇಂದು ಹೆಚ್ಚಿನ ತನಿಖೆಗಾಗಿ ಅವರನ್ನು ಮುಂಬೈಗೆ ಕರೆದೊಯ್ಯಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಸಲ್ಮಾನ್ ಬೆನ್ನಲ್ಲೇ ಸೂಪರ್ ಸ್ಟಾರ್ ಶಾರುಖ್ ಖಾನ್ಗೂ ಕೊಲೆ ಬೆದರಿಕೆ: ಎಫ್ಐಆರ್ ದಾಖಲು