ETV Bharat / state

ಇಂದು 7 ಸೋಂಕಿತರು ಗುಣಮುಖ: ಮೈಸೂರು ಜಿಲ್ಲೆಯಲ್ಲಿ ಕಡಿಮೆಯಾದ ಕೊರೊನಾ ಆತಂಕ - corona virus in mysore

ಪ್ರಸಿದ್ಧ ಪ್ರವಾಸಿ ತಾಣ ಮೈಸೂರಿನಲ್ಲಿ ಇಂದು 7 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಸಾರ್ವಜನಿಕರ ಆತಂಕ ದೂರವಾಗಿದೆ. ಸೋಂಕಿತ 87 ಜನರ ಪೈಕಿ, 48 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಿಸಿದೆ.

7 corona affected peoples recovered in mysore
ಇಂದು 7 ಸೋಂಕಿತರು ಗುಣಮುಖ
author img

By

Published : Apr 28, 2020, 8:04 PM IST

ಮೈಸೂರು: ಕೊರೊನಾ ಸೋಂಕಿನಿಂದ ಗುಣಮುಖರಾದ 7 ಜನರನ್ನು ಇಂದು ಸಂಜೆ ಮನೆಗೆ ಕಳುಹಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.

7 corona affected peoples recovered in mysore
ಇಂದು 7 ಸೋಂಕಿತರು ಗುಣಮುಖ

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 140, 159, 201, 213, 216, 311, 312 ಸಂಖ್ಯೆಯ ವ್ಯಕ್ತಿಗಳು ಗುಣಮುಖರಾಗಿದ್ದಾರೆ. ಜಿಲ್ಲೆಯ 87 ಸೋಂಕಿತರ ಪೈಕಿ 48 ಜನರನ್ನು ಗುಣಪಡಿಸಿ ವಾಪಸ್​ ಮನೆಗೆ ಕಳುಹಿಸಿದ್ದು, 39 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಬಿಲಂಟ್ ಕಾರ್ಖಾನೆ ಹಾಗೂ ತಬ್ಲಿಘಿ ಜಮಾತ್ ಸಂಪರ್ಕದ ಸೋಂಕಿತರಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದರು. ಈಗ ಗುಣಮುಖರ ಸಂಖ್ಯೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ಕೆಂಪು ವಲಯದಿಂದ ಶೀಘ್ರವೇ ಹಸಿರು ವಲಯಕ್ಕೆ ಜಿಲ್ಲೆ ಬರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.