ETV Bharat / state

ಅಪ್ಪ-ಮಗನ ಕ್ಷೇತ್ರದ ಸುಸಜ್ಜಿತ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ... ಇಲ್ಲಿ ನರ್ಸೇ ಎಲ್ಲಾ! - kannada news

ಈ ಆಸ್ಪತ್ರೆಗೆ ಕಳೆದ 2 ವರ್ಷಗಳಿಂದ ಎಂಬಿಬಿಎಸ್ ಮಾಡಿದ ಡಾಕ್ಟರ್ ಬಂದಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಒಬ್ಬರೇ ನರ್ಸ್ ಇದ್ದು, ಒಬ್ಬರು ಆಯುರ್ವೇದ ಡಾಕ್ಟರ್ ಇದ್ದಾರೆ. ಆದರೆ ಪ್ರತಿ ತಿಂಗಳು 40 ಜನ ಹೆರಿಗೆಗಾಗಿ ಬರುತ್ತಾರೆ. ಸಾಮಾನ್ಯ ಹೆರಿಗೆಗಳನ್ನು ನರ್ಸ್ ಮಾಡಿಸುತ್ತಾರೆ. ಅಷ್ಟಕ್ಕೂ ಇದು ಯಾರ ಕ್ಷೇತ್ರ ಅಂತಿರಾ? ಈ ಸುದ್ದಿ ಓದಿ...

50 ಬೆಡ್ ದಾವಾಖಾನೆ
author img

By

Published : Jun 11, 2019, 9:03 PM IST

ಮೈಸೂರು : ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ನಿರ್ಮಾಣವಾಗಿದ್ದ 50 ಬೆಡ್​​ವುಳ್ಳ ದವಾಖಾನೆ ಈಗ ಬರೀ ಹೆಸರಿಗಷ್ಟೇ ಸುಸಜ್ಜಿತ ಆಸ್ಪತ್ರೆಯಾಗಿದೆ. ಇಲ್ಲಿ ವೈದ್ಯರೇ ಇಲ್ಲದೇ ನರ್ಸ್ ಒಬ್ಬರೇ ಎಲ್ಲಾ ಕೆಲಸ ಮಾಡುವಂತಾಗಿದೆ.

ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ್ದ, ಪ್ರಸ್ತುತ ಅವರ ಪುತ್ರ ಡಾ. ಯತೀಂದ್ರ ಅವರು ಶಾಸಕರಾಗಿರುವ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿನ ಹೊಸಕೋಟೆಯ 24x7 ಆಸ್ಪತ್ರೆ ದುಸ್ಥಿತಿ. ಈ ಆಸ್ಪತ್ರೆಯನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸುತ್ತಮುತ್ತಲ 16 ಗ್ರಾಮಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಂಜೂರು ಮಾಡಿದ್ದರು. ಅಲ್ಲದೆ, ನಿರ್ಮಾಣದ ಬಳಿಕ ಇದರ ಉದ್ಘಾಟನೆಯನ್ನು ಸಹ ನೆರವೇರಿಸಿದ್ದರು.

ಆದರೆ, ಈ ಆಸ್ಪತ್ರೆಗೆ ಕಳೆದ 2 ವರ್ಷಗಳಿಂದ ಎಂಬಿಬಿಎಸ್ ಮಾಡಿದ ವೈದ್ಯರೇ ಬಂದಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಒಬ್ಬರೇ ನರ್ಸ್ ಇದ್ದು, ಒಬ್ಬರು ಆಯುರ್ವೇದ ವೈದ್ಯರಿದ್ದಾರೆ. ಆದ್ರೆ ಪ್ರತಿ ತಿಂಗಳು 40 ಜನ ಹೆರಿಗೆಗಾಗಿ ಬರುತ್ತಾರೆ. ‌ಇವರುಗಳಲ್ಲಿ ಸಾಮಾನ್ಯ ಹೆರಿಗೆಗಳನ್ನು ನರ್ಸ್ ಮಾಡಿಸುತ್ತಾರೆ. ಉಳಿದ ಜನರನ್ನು ಮೈಸೂರಿಗೆ ಕಳಿಸಿಕೊಡುತ್ತೇವೆ ಎಂದು ಹೇಳುತ್ತಾರೆ‌ ನರ್ಸ್ ಶಕುಂತಲಾ.

ಸುಸಜ್ಜಿತ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ

ಇನ್ನು, ಕ್ರಿಟಿಕಲ್ ಆದ ಹೆರಿಗೆಯನ್ನು ಆಯುರ್ವೇದಿಕ್ ವೈದ್ಯರೇ ಕೆಲವು ಸಂದರ್ಭಗಳಲ್ಲಿ ಮಾಡಿಸುತ್ತಾರಂತೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳಿದ್ದರೂ ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿಂದ ಇದ್ದು ಇಲ್ಲದಂತಾಗಿದೆ. ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Intro:ಮೈಸೂರು: ಹೆಸರಿಗಷ್ಟೇ ಸುಸಜ್ಜಿತ ಆಸ್ಪತ್ರೆ, ಆದರೆ ಇಲ್ಲಿ ವೈದ್ಯರೇ ಇಲ್ಲಾ ನರ್ಸ್ ಒಬ್ಬರೆ ಎಲ್ಲಾ ಕೆಲಸ ಮಾಡುತ್ತಾರೆ ಇದು ಯಾವ ಆಸ್ಪತ್ರೆ ಎಂಬ ಕುತೂಹಲವೇ ಈ ಸ್ಟೋರಿ ನೋಡಿ.Body:

ಹೌದು- ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಈಗ ಅವರ ಪುತ್ರ ಡಾ. ಯತೀಂದ್ರ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರ ವ್ಯಾಪ್ತಿಯ ಹೊಸಕೋಟೆಯ ೨೪×೭ ಆಸ್ಪತ್ರೆಯ ದುಸ್ಥಿತಿ.
ಇಲ್ಲಿಗೆ ಈ ಆಸ್ಪತ್ರೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ೫೦ ಬೆಡ್ ನ ಸುಸಜ್ಜಿತ ಆಸ್ಪತ್ರೆಯನ್ನು ಸುತ್ತಮುತ್ತಲ ೧೬ ಗ್ರಾಮಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಾಣ ಮಾಡಿ ಉದ್ಘಾಟನೆಯನ್ನು ಸಹ ನೆರವೇರಿಸಿದ್ದರು.
ಆದರೆ ಈ ಆಸ್ಪತ್ರೆಗೆ ಕಳೆದ ೨ ವರ್ಷಗಳಿಂದ ಎಂಬಿಬಿಎಸ್ ಮಾಡಿದ ಡಾಕ್ಟರ್ ಏ‌ ಬಂದಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಒಬ್ಬರೇ ನರ್ಸ್ ಇದ್ದು ಒಬ್ಬರು ಆಯುರ್ವೇದ ಡಾಕ್ಟರ್ ಇದ್ದಾರೆ.
ಆದರೆ ಪ್ರತಿ ತಿಂಗಳು ೪೦ ಜನ ಹೆರಿಗೆಗಾಗಿ ಬರುತ್ತಾರೆ. ‌ಇವರುಗಳಲ್ಲಿ ಸಾಮಾನ್ಯ ಹೆರಿಗೆಗಳನ್ನು ನರ್ಸ್ ಏ‌ ಮಾಡುತ್ತಾರೆ.
ಉಳಿದ ಜನರನ್ನು ಮೈಸೂರಿಗೆ ಕಳಿಸಿಕೊಡುತ್ತೇವೆ ಎಂದು ಹೇಳುತ್ತಾರೆ‌ ಗುತ್ತಿಗೆ ಆಧಾರದ ಇರುವ ನರ್ಸ್ ಶಕುಂತಲಾ.
ಇನ್ನೂ ಕ್ರಿಟಿಕಲ್ ಆದ ಹೆರಿಗೆಯನ್ನು ಆಯುರ್ವೇದಿಕ್ ವೈದ್ಯರೇ ಕೆಲವು ಸಂಧರ್ಭದಲ್ಲಿ ಮಾಡಿಸುತ್ತಾರೆ.
ಈ ಆಸ್ಪತ್ರೆ ಮೂಲಭೂತ ಸೌಲಭ್ಯಗಳು ಇದ್ದರು ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿಂದ ಇದ್ದು ಇಲ್ಲದಂತಾಗಿದೆ.
ಕೂಡಲೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.