ETV Bharat / state

ಐದು ಬೀದಿ ನಾಯಿಗಳ ಸಂಶಯಾಸ್ಪದ ಸಾವು: ವಿಷ ಆಹಾರ ನೀಡಿರುವ ಶಂಕೆ - 5 dogs death in mysore

ನಗರದ ಟಿ.ಕೆ ಬಡಾವಣೆಯಲ್ಲಿ ಮೂಡಾಗೆ ಸೇರಿದ ಖಾಲಿ ನಿವೇಶನದಲ್ಲಿ ಕಳೆದ ಮೂರು ದಿನಗಳಿಂದ ಸಂಶಯಾಸ್ಪದವಾಗಿ ಐದು ನಾಯಿಗಳು ಸಾವನ್ನಪ್ಪಿವೆ. ಅಸ್ವಸ್ಥಗೊಂಡ ಎರಡು ನಾಯಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪಾಲಿಕೆಯ ಪಶುವೈದ್ಯರು ಆಗಮಿಸಿ ಸತ್ತ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಬೀದಿನಾಯಿ
ಬೀದಿನಾಯಿ
author img

By

Published : Jun 13, 2020, 5:43 PM IST

ಮೈಸೂರು: ಕಳೆದ ಮೂರು ದಿನಗಳಿಂದ ನಗರದ ಟಿ.ಕೆ ಬಡಾವಣೆಯಲ್ಲಿ ಐದು ಬೀದಿ ನಾಯಿಗಳು ಸಾವನ್ನಪ್ಪಿದ್ದು , ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಟಿ.ಕೆ ಬಡಾವಣೆಯಲ್ಲಿ ಮೂಡಾಗೆ ಸೇರಿದ ಖಾಲಿ ನಿವೇಶನದಲ್ಲಿ ಕಳೆದ ಮೂರು ದಿನಗಳಿಂದ ಸಂಶಯಾಸ್ಪದವಾಗಿ ಐದು ನಾಯಿಗಳು ಸಾವನ್ನಪ್ಪಿವೆ. ಅಸ್ವಸ್ಥಗೊಂಡ ಎರಡು ನಾಯಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪಾಲಿಕೆಯ ಪಶುವೈದ್ಯರು ಆಗಮಿಸಿ ಸತ್ತ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

5 mysterious death
ನಾಯಿಗಳ ಸಂಶಯಾಸ್ಪದ ಸಾವು
5 mysterious death
ನಾಯಿಗಳ ಸಂಶಯಾಸ್ಪದ ಸಾವು

ವಿಷ ಹಾಕಿರುವ ಶಂಕೆ

ಟಿ.ಕೆ ಬಡಾವಣೆಯ ಖಾಲಿ ಪ್ರದೇಶದಲ್ಲಿ ರಾತ್ರಿ ವೇಳೆ ಪೋಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಇಲ್ಲಿಗೆ ಬರುವ ಪುಂಡರಿಗೆ ಈ ಬೀದಿ ನಾಯಿಗಳು ಅಟ್ಟಾಡಿಸುತ್ತಿದ್ದವು ಎನ್ನಲಾಗಿದೆ. ಇದರಿಂದ ಕೋಪಗೊಂಡಿರುವ ಪುಂಡರು ನಾಯಿಗಳಿಗೆ ವಿಷ ಆಹಾರ ನೀಡಿದ್ದಾರೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ ದೂರು ದಾಖಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.