ಮೈಸೂರು: ಜಿಲ್ಲೆಯಲ್ಲಿಂದು ಕೊರೊನಾ ಸೋಂಕು ದ್ವಿಶತಕ ಬಾರಿಸಿದೆ. ಮಾರಕ ಸೋಂಕಿನಿಂದ ಹೋರಾಡುತ್ತಾ ಐವರು ಮೃತಪಟ್ಟಿದ್ದಾರೆ.
ಕಳೆದು ಐದು ದಿನಗಳಿಂದ 200ರ ಸಂಖ್ಯಾ ಪ್ರಮಾಣದಲ್ಲಿ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇಂದು ಗುಣಮುಖರಾದ 135 ಮಂದಿ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದು, ಒಟ್ಟು 3,583 ಸೋಂಕಿತರ ಪೈಕಿ 1,145 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸದ್ಯ 2,310 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 128 ಮಂದಿ ಮೃತಪಟ್ಟಿದ್ದಾರೆ.