ಮೈಸೂರು: ಅನಗತ್ಯವಾಗಿ ತಿರುಗಾಡಿ ಕೊರೊನಾ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಒಂದೇ ದಿನ 446 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಏ.30 ರಂದು ಕಾರ್ಯಾಚರಣೆ ಮಾಡಿದ ಪೊಲೀಸರು, 398 ಬೈಕ್, 3 ಆಟೋ, 43 ಕಾರುಗಳು, ಎರಡು ಇತರ ವಾಹನಗಳು ಸೇರಿದಂತೆ ಒಟ್ಟು 446 ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದೆಕೊಳ್ಳುವಿಕೆಯ ಉಲ್ಲಂಘನೆ ಸಂಬಂಧ ಮೈಸೂರು ನಗರದಲ್ಲಿ 298 ಪ್ರಕರಣ ದಾಖಲಿಸಿ, 55,750 ರೂ.ದಂಡ ಸಂಗ್ರಹ ಮಾಡಲಾಗಿದೆ.
ಸಿದ್ದಾರ್ಥ ನಗರದ ವಿನಯ ಮಾರ್ಗದಲ್ಲಿರುವ ಡಿಜಿಟಲ್ ಪ್ಯಾಲೇಸ್ ಅಂಗಡಿ ಮಾಲೀಕರ ವಿರುದ್ಧ ,ಸಾಯಿ ಮೊಬೈಲ್ ಅಂಗಡಿಯ ಮಾಲೀಕರ ವಿರುದ್ಧ, ಮೊಬೈಲ್ ಪ್ಯಾಲೇಸ್ ಅಂಗಡಿ ಮಾಲೀಕರ ವಿರುದ್ಧ, ಮಾಸ್ ಧರಿಸದೇ ಓಡಾಡುತ್ತಿದ್ದ ಸುಜುಕಿ ಆಕ್ಸಿಸ್ ಸ್ಕೂಟರ್ನ ಮೂವರು ಸವಾರರನ್ನು ಪರಿಶೀಲಿಸಿ ವಾಹನವನ್ನು ನಿಲ್ಲಿಸಿದಾಗ ಮೂವರು ವಾಹನವನ್ನು ಬಿಟ್ಟು ಹೋಗಿದ್ದು ಈ ಮೂವರ ವಿರುದ್ಧ, ಸಾಮಾಜಿಕ ಹಾಗೂ ಮಾಸ್ಕ್ ಧರಿಸದೇ ಇದ್ದದರಿಂದ ಪ್ರಕರಣ ದಾಖಲಾಗಿದೆ.