ಮೈಸೂರು: 5 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಕೊರೊನಾಗೆ ಬಲಿಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಣಗಾಲ ಗ್ರಾಮದ ಅಣ್ಣಯ್ಯ(75), ಅವರ ಪುತ್ರ ತಮ್ಮೆಗೌಡ (42) ಹಾಗೂ ತಮ್ಮೆಗೌಡರ ಪತ್ನಿ ಸುಮ ( 38) ಮೃತ ದುರ್ದೈವಿಗಳು. 5 ದಿನಗಳ ಹಿಂದೆ ಅಣ್ಣಯ್ಯಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ತಮ್ಮೆಗೌಡ ಮತ್ತು ಸುಮ ಕೊರೊನಾ ಪಾಸಿಟಿವ್ನಿಂದ ಹಾಸನದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಅದಕ್ಕಿಂತ ಮೊದಲು ಅಣ್ಣಯ್ಯ ಮನೆಯಲ್ಲೇ ಮೃತಪಟ್ಟಿದ್ದರು. ಹೀಗೆ 5 ದಿನಗಳಲ್ಲಿ ಒಂದೇ ಕುಟುಂಬ ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಈ ಕುಟುಂಬದಲ್ಲಿ 20 ವರ್ಷದ ಮಗ ಹಾಗೂ 22 ವರ್ಷದ ಮಗಳಿದ್ದಾರೆ.
ಓದಿ: ದೇಶದಲ್ಲಿ ಕಡಿಮೆಯಾದ ಕೊರೊನಾ ಅಬ್ಬರ: ಕಳೆದ 24 ಗಂಟೆಯಲ್ಲಿ 1.34 ಲಕ್ಷ ಕೇಸ್ ಪತ್ತೆ