ಮೈಸೂರು : ಗ್ರಾಮ ಪಂಚಾಯತ್‌ನ 2ನೇ ಹಂತದ 102 ಗ್ರಾಮ ಪಂಚಾಯತ್‌ಗಳ 1,929 ಸ್ಥಾನಗಳಿಗೆ 2,217 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರು ತಾಲೂಕಿನ 23 ಗ್ರಾಪಂಗಳ 511 ಸ್ಥಾನಗಳಿಗೆ 684 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಂಜನಗೂಡಿನ 43 ಗ್ರಾಪಂಗಳ 810 ಸ್ಥಾನಗಳಿಗೆ 825 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ತಿ.ನರಸೀಪುರ ತಾಲೂಕಿನ 37 ಗ್ರಾಪಂಗಳ 608 ಸ್ಥಾನಗಳಿಗೆ 708 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಮೊದಲನೇ ಹಂತ : ಗ್ರಾಪಂ ಮೊದಲನೇ ಹಂತದ ಚುನಾವಣೆಗೆ 123 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ್ರೆ, 6,165 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹುಣಸೂರಿನ 41 ಗ್ರಾಪಂಗಳ 595 ಸ್ಥಾನಗಳಿಗೆ 40 ಅವಿರೋಧ ಆಯ್ಕೆಯಾದ್ರೆ,1593 ಮಂದಿ ಕಣದಲ್ಲಿದ್ದಾರೆ. ಕೆಆರ್‌ನಗರ 34 ಗ್ರಾಪಂಗಳ 562 ಸ್ಥಾನಗಳಿಗೆ 31 ಮಂದಿ ಅವಿರೋಧ ಆಯ್ಕೆಯಾದ್ರೆ,1495 ಅಭ್ಯರ್ಥಿಗಳು ಸ್ಫರ್ಧೆ ಮಾಡಿದ್ದಾರೆ.
ಓದಿ...ಅಧಿಕ ಆಸ್ತಿ ಹೊಂದಿರುವ ಆರೋಪ : ಮೈಸೂರಿನ ಎಸಿಎಫ್ ಮನೆ ಮೇಲೆ ಎಸಿಬಿ ದಾಳಿ
ಪಿರಿಯಾಪಟ್ಟಣದ 34 ಗ್ರಾಪಂಗಳ 549 ಸ್ಥಾನಗಳಿಗೆ 27 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1,408 ಮಂದಿ ಕಣದಲ್ಲಿದ್ದಾರೆ. ಹೆಚ್ ಡಿ ಕೋಟೆಯ 26 ಗ್ರಾಪಂಗಳ 407 ಸ್ಥಾನಗಳಿಗೆ 20 ಮಂದಿ ಅವಿರೋಧವಾಗಿ ಆಯ್ಕೆಯಾದ್ರೆ, 1,106 ಮಂದಿ ಸ್ಫರ್ಧೆಯಲ್ಲಿದ್ದಾರೆ. ಸರಗೂರಿನ 13 ಗ್ರಾಪಂಗಳ 190 ಸ್ಥಾನಗಳಿಗೆ 5 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 563 ಮಂದಿ ಕಣದಲ್ಲಿದ್ದಾರೆ.