ಮೈಸೂರು: ಕೊರೊನಾ ಮುಕ್ತ ಗ್ರಾಮಕ್ಕೆ ಅಭಿನಂದಿಸಿ 25 ಸಾವಿರ ರೂ.ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಪ್ರಧಾನಿ ಮೋದಿಯವರ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮದ ಬಗ್ಗೆ ಪ್ರಧಾನಿಯವರು ಮಾಹಿತಿ ಕೇಳಿದ್ದಾರೆ. ಮೈಸೂರಿನಲ್ಲಿ ಕೋವಿಡ್ ಮಿತ್ರ ಮಾಡಿದ್ದೀವಿ, ಈ ಪರಿಕಲ್ಪನೆಯಿಂದ ಚೆನ್ನಾಗಿ ಕೆಲಸಆಗುತ್ತಿದೆ. ಜಿಲ್ಲೆಯ 150 ಪ್ರಾಥಮಿಕ ಕೇಂದ್ರಗಳು ಕೋವಿಡ್ ಮಿತ್ರ ಕೇಂದ್ರಗಳಾಗಿವೆ. ಕೊರೊನಾ ಸೋಂಕು ತಗುಲಿದ ಮೊದಲೈದು ದಿನ ಮುಖ್ಯವಾದದ್ದು, ಅವರಿಗೆ ತಕ್ಷಣ ಮೆಡಿಷನ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆಸ್ಪತ್ರೆಗಳ ಅವಲಂಬನೆ ಕಡಿಮೆಯಾಗಲಿದೆ ಎಂದರು.
ಟೆಲಿಮೆಡಿಷನ್ ಕಾನ್ಸೆಪ್ಟ್ ಕೂಡ ವಕ್೯ ಆಗುತ್ತಿದೆ. ಯುಕೆಯಲ್ಲಿರುವ ಮೈಸೂರಿನ ವೈದ್ಯರು ಭಾಗಿಯಾಗುತ್ತಿದ್ದಾರೆ. ನುರಿತ ವೈದ್ಯರಿಂದ ಜನರಿಗೆ ಟೆಲಿ ಟ್ರೀಟ್ಮೆಂಟ್ ಕೊಡುವ ಕೆಲಸವಾಗುತ್ತಿದೆ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಮೈಸೂರು ತಾಲೂಕು ಹಾಗೂ ನಂಜನಗೂಡು ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಕೇಸ್ಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಪ್ರಕರಣಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು.
ಓದಿ: ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಗೌಡರಿಗೆ ಗಣ್ಯರಿಂದ ಶುಭಾಶಯ!