ಮೈಸೂರು: ಜಿಲ್ಲೆಯಲ್ಲಿಂದು ಒಂದೇ ದಿನ ಕೊರೊನಾಗೆ 11 ಮಂದಿ ಮೃತಪಟ್ಟಿದ್ದು,110 ಮಂದಿಗೆ ಸೋಂಕು ತಗುಲಿದೆ.
![ಮೀಡಿಯಾ ಬುಲೆಟಿನ್](https://etvbharatimages.akamaized.net/etvbharat/prod-images/kn-mys-08-corona-vis-ka10003_19072020202351_1907f_1595170431_888.jpg)
ಸಂಪರ್ಕಿತರಿಂದ 49, ಐಎಲ್ಐಗೆ 38, ಪ್ರಯಾಣದ ಹಿನ್ನೆಲೆಯುಳ್ಳವರು 12, ಎಸ್ಎಆರ್ಐ 7, ರೋಗ ಲಕ್ಷಣ ರಹಿತ 4 ಮಂದಿ ಸೇರಿದಂತೆ ಒಟ್ಟಾರೆ 110 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 23 ಮಂದಿ ಗುಣಮುಖರಾಗಿ ಡಿಸ್ಚಾಜ್೯ ಆಗಿದ್ದು, 11 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.
![ಮೀಡಿಯಾ ಬುಲೆಟಿನ್](https://etvbharatimages.akamaized.net/etvbharat/prod-images/kn-mys-08-corona-vis-ka10003_19072020202351_1907f_1595170431_889.jpg)
ಒಟ್ಟಾರೆ ಮೈಸೂರಿನಲ್ಲಿ 31419 ಮಂದಿಯ ಕೊರೊನಾ ಸ್ಯಾಂಪಲ್ ಟೆಸ್ಟ್ ಮಾಡಿದ್ದು, ಅದರಲ್ಲಿ 29,624 ಮಂದಿಯ ವರದಿ ನೆಗೆಟಿವ್ ಬಂದಿದೆ. ಕೊರೊನಾದಿಂದ ಈವರೆಗೆ 598 ಮಂದಿ ಡಿಸ್ಚಾಜ್೯ ಆಗಿದ್ದಾರೆ. 956 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಕೊರೊನಾ 70 ರೋಗಿಗಳು ಸಾವನ್ನಪ್ಪಿದ್ದಾರೆ. ಇಂದು ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ 110 ಆಗಿದೆ.