ETV Bharat / state

10 ಕುಖ್ಯಾತ ಸರಗಳ್ಳರ ಬಂಧನ: 1 ಕೆಜಿ ತೂಕದ 25 ಚಿನ್ನದ ಸರಗಳು ವಶ - thieves arrested in mysore

ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಬಗ್ಗೆ ಕಾರ್ಯಾಚರಣೆ ನಡೆಸಿ, 10 ಜನ ಕುಖ್ಯಾತ ಸರಗಳ್ಳರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಅವರಿಂದ 1 ಕೆಜಿ ತೂಕದ 25 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

chain stanching thieves arrested in mysore
ಕುಖ್ಯಾತ ಸರಗಳ್ಳರ ಬಂಧನ
author img

By

Published : Sep 30, 2022, 4:29 PM IST

ಮೈಸೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ, 10 ಕುಖ್ಯಾತ ಸರಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ ತೂಕದ 25 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ವಿಶೇಷ ತಂಡ ರಚನೆ: ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿದೆ. ಈ ಬಗ್ಗೆ ಸಿಸಿಬಿ, ಎಸಿಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ, ಚಾಮರಾಜನಗರ ಮೂಲದ ಹಳೆಯ ಕಳ್ಳ ಮಂಜನನ್ನು ವಿಚಾರಣೆಗೆ ಒಳಪಡಿಸಿತ್ತು.

10 ಜನ ಕುಖ್ಯಾತ ಸರಗಳ್ಳರ ಬಂಧನ

ಚಿನ್ನದ ಸರ, ಬಳೆಗಳು ವಶಕ್ಕೆ: ಆತ ನೀಡಿದ ಮಾಹಿತಿಯ ಮೇರೆಗೆ ಈ ತಂಡದ ಇತರ 9 ಜನ ಸದಸ್ಯರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿತ್ತು. ಇವರುಗಳು ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ, ಸುಮಾರು 50 ಲಕ್ಷ ಮೌಲ್ಯದ ಚಿನ್ನದ ಸರ ಮತ್ತು ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯಕ್ಕೆ ಬಳಸಿದ್ದ 7 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಸರಗಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಸರಗಳ್ಳರಿಗೆ ವಕೀಲ ಸಾಥ್​​: ಕಳೆದ 2 ತಿಂಗಳ ಹಿಂದೆ ಮನೆಗಳ್ಳತನ ಕೇಸ್​ನಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿದಾಗ, ಮನೆಗಳ್ಳರು ಹಾಗೂ ಸರಗಳ್ಳರಿಗೆ ವಕೀಲ ಉಮೇಶ ಎಂಬುವವರು ಕುಮ್ಮಕ್ಕು ನೀಡುತ್ತಿದ್ದರು ಎನ್ನಲಾಗ್ತಿದೆ. ಸರಗಳ್ಳತನ ಮಾಡಿದ ಚಿನ್ನದ ಸರಗಳನ್ನು ವಕೀಲ ಮಾರಾಟ ಮಾಡಿಸುತ್ತಿದ್ದ ಹಾಗೂ ಸಿಕ್ಕಿಬಿದ್ದ ಸರಗಳ್ಳರಿಗೆ ಜಾಮೀನು ಸಹ ಕೊಡಿಸುತ್ತಿದ್ದನು. ಈ ವಕೀಲನನ್ನೂ ಬಂಧಿಸಲಾಗಿದ್ದು, ಈತನ ಜೊತೆ ಕೃತ್ಯದಲ್ಲಿ ಭಾಗಿಯಾಗಿದ್ದ ಸರಗಳ್ಳರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ನಾಲ್ವರು ಸರಗಳ್ಳರ ಬಂಧನ,13.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

ಚಿನ್ನಾಭರಣ ವಾರಸುದಾರರಿಗೆ ವಾಪಸ್: ಸರ ಕಳೆದುಕೊಂಡ ಮಹಿಳೆಯರಿಗೆ ಇಂದು ಸುದ್ದಿಗೋಷ್ಠಿ ನಡೆಸಿದ ನಂತರ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ವಾಪಸ್ ನೀಡಿದರು.

ಒಂದು ಪಿಎಫ್ಐ ಕಚೇರಿ ಸೀಲ್​​: ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮೈಸೂರಿನಲ್ಲಿ ಒಂದು ಪಿಎಫ್ಐ ಕಚೇರಿಯನ್ನು ಸೀಲ್ ಮಾಡಲಾಗಿದೆ. 3 ಜನರನ್ನು ಬಂಧಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಭಾರತ್ ಜೋಡೋ ಯಾತ್ರೆ: ಅಕ್ಟೋಬರ್ 2 ರಂದು ಮೈಸೂರು ನಗರ ಪ್ರವೇಶ ಮಾಡಲಿದ್ದು. ಈ ಸಂಬಂಧ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಚಾರದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದ್ದು, ದಸರಾಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.