ETV Bharat / state

ಮಂಡ್ಯ: ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಯುವಕನಿಗೆ ಚೂರಿ ಇರಿತ

author img

By

Published : Oct 4, 2021, 8:16 AM IST

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಆಯೋಜಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಯುವಕನೋರ್ವನಿಗೆ ಮತ್ತೋರ್ವ ಯುವಕ ಚಾಕುವಿನಿಂದ ಇರಿದಿದ್ದಾನೆ.

young-man-stabbed-knife-to-person-in-mandya
ಮಂಡ್ಯ: ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಯುವಕನಿಗೆ ಚೂರಿ ಇರಿತ

ಮಂಡ್ಯ: ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಮತ್ತೋರ್ವ ಯುವಕ ಚಾಕುವಿನಿಂದ ಇರಿದ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ‌.

ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ‌ ಆಯೋಜಿಸಲಾಗಿತ್ತು. ಈ ವೇಳೆ ಮೈಸೂರು ತಾಲೂಕು ಕಾಮನಕೆರೆ ಹುಂಡಿ ಗ್ರಾಮದ ಶಿವು(21) ಎಂಬಾತ ಪಾಲಹಳ್ಳಿ ಗ್ರಾಮದ ಯುವಕ ಸಚಿನ್(22)ಗೆ ಚಾಕುವಿನಿಂದ ಇರಿದ್ದಾನೆ. ಸ್ಥಳದಲ್ಲಿದ್ದ ಊರಿನ ಜನರು ತಮ್ಮೂರಿನ‌ ಯುವಕನಿಗೆ ಚಾಕುವಿನಿಂದ ಇರಿದ ಅನ್ಯ ಗ್ರಾಮದ ಸಚಿನ್​​ಗೆ ಥಳಿಸಿದ್ದಾರೆ.

ಚಾಕುವಿನಿಂದ ಇರಿಸಿಕೊಂಡ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಊರ ಜನರ ಜನರಿಂದ ಥಳಿತಕ್ಕೊಳಗಾದ ಯುವಕನಿಗೂ ಗಂಭೀರ ಗಾಯಗಳಾಗಿದ್ದು, ಪೊಲೀಸರು ಮೈಸೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ.

ಘಟನೆಯಿಂದ ಸ್ಥಳದಲ್ಲಿ ಬಿಗುವಿನ‌ ವಾತಾವರಣ ನಿರ್ಮಾಣವಾಗಿದ್ದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ರವಾನಿಸಿದ ಗವಿಸಿದ್ದೇಶ್ವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.