ಮಂಡ್ಯ: ಮನೆಯಲ್ಲಿ ಸಾಕಿದ್ದ ಹಸು ತಿವಿದು ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ. ಮಾದೇಶ್ (13) ಮೃತ ದುರ್ದೈವಿ ಬಾಲಕ. ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ವೇಳೆ ಬಾಲಕನನ್ನು ತಿವಿದಿರುವ ದುರ್ಘಟನೆ ನಡೆದಿದೆ.
ಸುದ್ದಿಗಾರರೊಂದಿಗೆ ತಂದೆ ಕೃಷ್ಣಪ್ಪ ಮಾತನಾಡಿ, ಹಸುವನ್ನು ಸುಮಾರು ದಿನಗಳಿಂದ ಅವನೇ ಸಾಕುತ್ತಿದ್ದು, ಹುಲ್ಲನ್ನು ಎಳೆಯಲು ಹೋದಾಗ ಆಕಸ್ಮಿಕವಾಗಿ ಹೊಟ್ಟೆಯ ಭಾಗಕ್ಕೆ ತಿವಿದಿದೆ. ತಕ್ಷಣವೇ ಕೆಎಂ ದೊಡ್ಡಿ ಮಾದೇಗೌಡ ಆಸ್ಪತ್ರೆಯಲ್ಲಿ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಓದಿ : ಉಜಿರೆಯಲ್ಲಿ ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ: ನಾಲ್ವರ ಮೇಲೆ ಕೇಸ್
ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.