ETV Bharat / state

ಮಹಿಳಾ ದಿನ: ಮೀನುಗಾರಿಕೆಯಲ್ಲಿ ತೊಡಗಿದ ಬೆಸ್ತ ಸಮುದಾಯದ ಮಹಿಳೆಯರು

ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ ಕೆರೆಯಲ್ಲಿ ಜಿ.ಪಂ.ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಂಗಾಪರಮೇಶ್ವರಿ ಮೀನುಗಾರರ ಸಂಘದ ಮಹಿಳೆಯರು ತಮ್ಮ ವೃತ್ತಿಕಾಯಕವಾದ ಮೀನುಗಾರಿಕೆಯಲ್ಲಿ ತೊಡಗಿದ್ದರು.

Women's involved fishing  in Mandya
ಮೀನುಗಾರಿಕೆಯಲ್ಲಿ ತೊಡಗಿದ ಬೆಸ್ತರ ಜನಾಂಗದ ಮಹಿಳೆಯರು
author img

By

Published : Mar 9, 2021, 9:00 AM IST

ಮಂಡ್ಯ: ವಿವಿಧ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿದ್ದು, ಸುಲಲಿತವಾಗಿ ಆಡಳಿತ ನಡೆಸುತ್ತಿದ್ದಾರೆ. ಇದರ ಜತೆ ಜಿಲ್ಲೆಯ ಸಾಮಾನ್ಯ ಮಹಿಳೆಯರು ಕೂಡ ನಾವೇನು ಕಡಿಮೆ ಇಲ್ಲ ಎಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಮಹಿಳಾ ದಿನಾಚರಣೆ: ಮೀನುಗಾರಿಕೆಯಲ್ಲಿ ತೊಡಗಿದ ಬೆಸ್ತರ ಜನಾಂಗದ ಮಹಿಳೆಯರು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಸಕ್ಕರೆ ನಾಡಿನ ಬೆಸ್ತರ ಜನಾಂಗದ ಮಹಿಳೆಯರು ಹುಟ್ಟು ಹಿಡಿದು ಬಲೆ ಬಿಡುವ ಮೂಲಕ ಮೀನುಗಾರಿಕೆಯಲ್ಲಿ ತೊಡಗಿ ವಿಭಿನ್ನವಾಗಿ ಮಹಿಳಾ ದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ ಕೆರೆಯಲ್ಲಿ ಜಿ.ಪಂ. ಹಾಗೂ ಮೀನುಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಂಗಾಪರಮೇಶ್ವರಿ ಮೀನುಗಾರರ ಸಂಘದ ಮಹಿಳೆಯರು ತಮ್ಮ ವೃತ್ತಿ ಕಾಯಕವಾದ ಮೀನುಗಾರಿಕೆಯಲ್ಲಿ ತೊಡಗಿದ್ದರು. ಪುರುಷರಿಗಿಂತ ತಾವೆನೂ ಕಮ್ಮಿ ಇಲ್ಲ ಎಂಬಂತೆ ಕೆರೆಗಿಳಿದು ಹುಟ್ಟು ಹಿಡಿದು ದೋಣಿ ಸಾಗಿಸಿ ಬಲೆಬಿಟ್ಟು ಮೀನು ಹಿಡಿಯಲು ಮುಂದಾಗಿದ್ದಾರೆ. 70 ವರ್ಷದ ವೃದ್ದೆಯು ಸಹ ಮೀನುಗಾರಿಕೆಯಲ್ಲಿ ತೊಡಗಿ ಇತರಿಗೆ ಮಾದರಿಯಾಗಿ ಕಷ್ಟದ ಜೊತೆ ಕಾಯಕದ ಸಂತಸ ವ್ಯಕ್ತಪಡಿಸಿದರು.

ಸರ್ಕಾರ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡಿದೆ ಎಂದು ಹೇಳಿದೆ. ಆದರೆ ಮಂಗಳೂರು, ಮಲ್ಪೆ ಮೀನುಗಾರರಿಗೆ ಮಾತ್ರ ವಿಶೇಷ ಪ್ಯಾಕೇಜ್​ ನೀಡಿದ್ದು, ನಮಗೆ ಯಾವುದೇ ಸೌಲಭ್ಯ ನೀಡಿಲ್ಲ. ಮೀನುಗಾರಿಕೆ ನಮ್ಮ ಜೀವನದ ವೃತ್ತಿಯಾಗಿದೆ. ಮೀನುಗಾರರಿಗೆ ಯಾವುದೇ ಜೀವನಾಂಶವಿಲ್ಲದೇ, ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಮೀನುಗಾರರ ಸಂಘದ ಅಧ್ಯಕ್ಷೆ ಗಾಯಿತ್ರಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಹಿಳೆಯರು ಸಹ ಮೀನುಗಾರಿಕೆಯಲ್ಲಿ ತೊಡಗಿರುವುದು ಸಂತಸ ತಂದಿದೆ. ಜೊತೆಗೆ ಮಹಿಳಾ ಮೀನುಗಾರರಿಗೆ ಸರ್ಕಾರದಿಂದ ಸಿಗಬೇಕಾದ ಯೋಜನೆಗಳನ್ನ ಕೊಡಿಸಿ ಕೊಡುವುದಾಗಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾರಾಯಣ್ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.