ಮಂಡ್ಯ: ಕಾಡಾನೆಗಳ ದಾಳಿಗೆ ಬಾಳೆ ಹಾಗೂ ರಾಗಿ ಬೆಳೆ ನಾಶವಾಗಿರುವ ಘಟನೆ ಮಳವಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವರಾಜು ಎಂಬ ರೈತನಿಗೆ ಸೇರಿದ ಜಮೀನಿಗೆ ಕಾಡಾನೆಗಳು ದಾಳಿ ಮಾಡಿದ್ದು, ಕಟಾವಿಗೆ ಬಂದಿದ್ದ ಬಾಳೆ ಹಾಗೂ ಅರ್ಧ ಎಕರೆಯಲ್ಲಿ ಹಾಕಲಾಗಿದ್ದ ರಾಗಿ ಬೆಳೆಯನ್ನು ನಾಶ ಮಾಡಿವೆ. ಬೆಳೆ ನಷ್ಟದಿಂದ ರೈತನಿಗೆ ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.