ಮಂಡ್ಯ: ಇಷ್ಟು ದಿನ ರಾಜಕಾರಣಿಗಳ ಗ್ರಾಮ ವಾಸ್ತವ್ಯ ಆಯ್ತು, ಈಗ ಜನರ ಸಮಸ್ಯೆ ಆಲಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.
ಮಂಡ್ಯ ಎಸ್‌ಪಿ ಶಿವಪ್ರಕಾಶ್ ದೇವರಾಜು ಮಾಜಿ ಸಿಎಂ ಎಸ್.ಎಂ. ಕೃಷ್ಣ ತವರು ಗ್ರಾಮ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ವಾಸ್ತವ್ಯ ಹೂಡಿದ್ದು, ಗ್ರಾಮದ ಜನರ ಕಾನೂನಾತ್ಮಕ ಸಮಸ್ಯೆಗಳನ್ನು ಆಲಿಸಿದ್ದಾರೆ.
ಗ್ರಾಮ ವಾಸ್ತವ್ಯಕ್ಕೂ ಮುನ್ನ ಎಸ್.ಪಿ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಒಂದೊಂದಾಗಿ ತೆರೆದಿಟ್ಟರು. ಮದ್ಯದ ಅಂಗಡಿಗಳಿಂದ ಆಗುತ್ತಿರುವ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಾತ್ರಿ ಗಸ್ತು, ಕಳ್ಳತನ ಪ್ರಕರಣ ಕುರಿತು ಗಮನ ಸೆಳೆದರು. ಎಲ್ಲಾ ಸಮಸ್ಯೆಗಳಿಗೆ ಖುದ್ದು ಎಸ್‌ಪಿಯೇ ಉತ್ತರ ನೀಡಿ, ಪರಿಹಾರದ ಭರವಸೆ ನೀಡಿದ್ರು.
ಮಂಡ್ಯ ಉಪ ವಿಭಾಗದ ಡಿವೈಎಸ್‌ಪಿ ಕೆ.ಎಂ. ದೊಡ್ಡಿ, ಮದ್ದೂರು ಸಿಪಿಐ ಸೇರಿದಂತೆ ಎಸ್‌ಐ ವರ್ಗದ ಅಧಿಕಾರಿಗಳು ಎಸ್.ಪಿಗೆ ಸಾಥ್ ನೀಡಿದ್ರು.