ಮಂಡ್ಯ: ಗ್ರಾಮ ಪಂಚಾಯತ್ ಮುಂದೆಯೇ ಉಪಾಧ್ಯಕ್ಷನ ಬಟ್ಟೆ ಹರಿದು ರಂಪಾಟ ಮಾಡಿರುವ ಘಟನೆ ಮದ್ದೂರಿನ ವಳಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಜಗದೀಶ್ ಬಣದಲ್ಲಿ ಗುರ್ತಿಸಿಕೊಂಡಿದ್ದ ಗಿರೀಶ್ ಎಂಬಾತ, ಮತದಾನದ ವೇಳೆ ಶಂಕರೇಗೌಡ ಬಣದ ಜೊತೆ ಶಾಮೀಲಾಗಿ ಉಪಾಧ್ಯಕ್ಷನಾಗಿ ಗಿರೀಶ್ ಆಯ್ಕೆಯಾಗಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಜಗದೀಶ್ ಬಣದ ಬೆಂಬಲಿಗರು ಬಟ್ಟೆ ಹರಿದು ಗಿರೀಶ್ನನ್ನು ಎಳೆದಾಡಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.