ETV Bharat / state

ಮಂಡ್ಯ: ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲು - ಮಂಡ್ಯ

ಕೆರೆಯಲ್ಲಿ ಈಜಲು ಹೋಗಿ ಸ್ನೇಹಿತರಿಬ್ಬರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್​. ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಭರತ್(24) ಹಾಗೂ ವಿನೋದ್(22) ಮೃತ ಯುವಕರು.

mandya
ಭರತ್ ಮತ್ತು ವಿನೋದ್
author img

By

Published : Jan 30, 2021, 1:39 PM IST

Updated : Jan 30, 2021, 1:45 PM IST

ಮಂಡ್ಯ: ಕೆರೆಯಲ್ಲಿ ಈಜಲು ಹೋಗಿ ಸ್ನೇಹಿತರಿಬ್ಬರು ಜಲ ಸಮಾಧಿಯಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್​. ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ: ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲು

ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಭರತ್(24) ಮತ್ತು ವಿನೋದ್ (22) ಮೃತಪಟ್ಟ ಯುವಕರು. ಮೃತರಿಬ್ಬರ ಶವವನ್ನು ಪೊಲೀಸರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.

ಸಂತೆ ಬಾಚಹಳ್ಳಿ ಗ್ರಾಮದಲ್ಲಿರುವ ಗವಿರಂಗಪ್ಪನ ದೇವಸ್ಥಾನಕ್ಕೆ ಈ ಯುವಕರು ಕುಟುಂಬದೊಂದಿಗೆ ದೇವರ ದರ್ಶನ ಪಡೆಯಲು ಬಂದಿದ್ದರು. ದರ್ಶನ ಪಡೆದ ಬಳಿಕ ಈ ಯುವಕರು ತಮ್ಮೂರಿನ ಇನ್ನಿಬ್ಬರು ಯುವಕರ ಜೊತೆ ದೇವಾಲಯದ ಸಮೀಪದಲ್ಲೇ ಇದ್ದ ಕೆರೆಗೆ ಈಜಲು ತೆರಳಿದ್ದರು. ವೇಳೆ ಕೆರೆಯ ಕೆಸರಿಗೆ ಸಿಲುಕಿ ಮೃತಪಟ್ಟಿದ್ದಾರೆ‌ ಎನ್ನಲಾಗುತ್ತಿದೆ.

ಮೃತ ವಿನೋದ ಹೊಳಲು ಗ್ರಾ.ಪಂ.ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಭರತ್ ಮಂಡ್ಯದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಇವರ ಜತೆ ಇನ್ನಿಬ್ಬರು ಸೇರಿ ನಾಲ್ವರು ಸ್ನೇಹಿತರು ಕೆರೆಗೆ ಇಳಿದಾಗ ಭರತ್ ಮತ್ತು ವಿನೋದ ಕೆರೆಯ ಕೆಸರಿನಲ್ಲಿ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಇದರಿಂದ ಗಾಬರಿಗೊಂಡ ಉಳಿದ ಇಬ್ಬರು ದೇವಾಲಯದ ಬಳಿ ಇದ್ದ ಪೋಷಕರಿಗೆ ಸುದ್ದಿ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕೆರೆಯ ಬಳಿ‌ ಹಬ್ಬ ಮಾಡಲು ಬಂದಿದ್ದ ಪೋಷಕರು ಸೇರಿದಂತೆ ಊರಿನ‌ ಜನರು ಜಮಾಯಿಸಿದ್ದರು. ಸ್ಥಳದಲ್ಲಿ ಮಕ್ಕಳನ್ನು ಕಳೆದು ಕೊಂಡ ಕುಟುಂಬಸ್ಥರ ಆಕ್ರಂದನ‌ ಮುಗಿಲು ಮುಟ್ಟಿತ್ತು. ಮೃತ ಯುವಕರ ಶವಕ್ಕಾಗಿ ಸ್ಥಳೀಯ ಈಜುಗಾರರು ಸೇರಿದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕೈದು ತಾಸುಗಳ ಕಾರ್ಯಾಚರಣೆ ನಡೆಸಿದ ಬಳಿಕ ಇಬ್ಬರ ಶವವನ್ನು ನೀರಿನಿಂದ ಹೊರ ತೆಗೆಯಲಾಯಿತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಪತ್ತೆಯಾದ ಇಬ್ಬರ ಶವವನ್ನು‌ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಪೋಷಕರಿಗೆ ಶವವನ್ನು ಹಸ್ತಾಂತರಿಸಿದ್ದಾರೆ.

ಮನೆ ದೇವರ ಹಬ್ಬ ಮಾಡಿ ಸಂಭ್ರಮಿಸಬೇಕಾದ ಮನೆಯಲ್ಲಿ ಇದೀಗ ಸೂತಕದ ಛಾಯೆ‌ ಆವರಿಸಿದೆ. ಮೃತ ಯುವಕರ ಸಾವಿನಿಂದ ಹೊಳಲು ಗ್ರಾಮದಲ್ಲಿ ಮೌನ‌ ಆವರಿಸಿದೆ.

Last Updated : Jan 30, 2021, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.