ಮಂಡ್ಯ: ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ಪಾಂಡವಪುರ ತಾಲೂಕಿನ ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಮಹದೇವಪ್ಪ ಎಂಬವರ ಮಕ್ಕಳಾದ ಚಂದನ್, ಕಾರ್ತಿಕ್ ಮತ್ತು ಮಲ್ಲಿಕಾರ್ಜುನ ಎಂಬವರ ಪುತ್ರ ರಿತೇಶ್ ಮೃತರು.
![dead bodies children](https://etvbharatimages.akamaized.net/etvbharat/prod-images/11325939_thumbnail.jpg)
ಯಾರು ಇಲ್ಲದ ಸಮಯದಲ್ಲಿ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತೋಟದ ಬಳಿ ಹೋದ ಮಹದೇವಪ್ಪ ಕೃಷಿ ಹೊಂಡದಲ್ಲಿ ತೇಲುತ್ತಿದ್ದ ಮಕ್ಕಳ ಮೃತದೇಹ ಕಂಡು ಗಾಬರಿಗೊಂಡು ಕಿರುಚಿದ್ದಾರೆ. ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಬಂದು ಮೃತದೇಹವನ್ನು ಮೇಲೆತ್ತಿದ್ದಾರೆ.
![dead bodies children](https://etvbharatimages.akamaized.net/etvbharat/prod-images/11325939_thumbnail-2.jpg)
ಘಟನೆಯಿಂದ ನೊಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.