ETV Bharat / state

ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದವರು ಮಸಣ ಸೇರಿದ್ರು: ಮಂಡ್ಯದಲ್ಲಿ ಮೂವರ ಸಾವು - feast went to Cemetery

ಮಂಡ್ಯ ಮೂಲದವರಾದ ಬೆಂಗಳೂರಿನ ಯುವಕರು ಹಬ್ಬಕ್ಕೆಂದು ಮನೆಗೆ ಬಂದು, ನಾಲೆಗೆ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಂಡ್ಯದಲ್ಲಿ ಮೂವರ ಸಾವು
author img

By

Published : Oct 2, 2019, 9:21 PM IST

ಮಂಡ್ಯ: ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಸಮೀಪದ ಮಂಗಲ ಗ್ರಾಮದ ಬಳಿ ವಿಸಿ ನಾಲೆಯಲ್ಲಿ ಈಜಲು ಹೋಗಿದ್ದ ನಾಗರಬಾವಿ ನಿವಾಸಿ ಮಹೇಂದ್ರ (32) ಹಾಗೂ ಆರ್.ಆರ್.ನಗರದ ಮಹೇಶ್(30) ನಾಲೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇಬ್ಬರೂ ನಿನ್ನೆ ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದರು ಎಂದು ಹೇಳಲಾಗಿದ್ದು, ಇಂದು ಈಜಲು ಹೋಗಿ ನೀರುಪಾಲಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇನ್ನು ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿಯ ರಾಮಸ್ವಾಮಿ ನಾಲೆಯಲ್ಲಿ ಈಜಲು ಹೋಗಿದ್ದ ಮತ್ತೊಬ್ಬ ಯುವಕ ಸಾವಿಗೀಡಾಗಿದ್ದು, ಈತನೂ ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದ ಎನ್ನಲಾಗಿದೆ.

ಮೃತ ಯುವಕನನ್ನು ಮೈಸೂರು ಜಿಲ್ಲೆ ಕೊಡಗಹಳ್ಳಿಯ ಯಶ್ವಂತ್ (20) ಎಂದು ಗುರುತಿಸಲಾಗಿದ್ದು, ಅರಕೆರೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:ಮಂಡ್ಯ: ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ಸೇರಿದಂತೆ ಪ್ರತ್ಯೇಕ ಘಟನೆಯಲ್ಲಿ ನೀರಿನಲ್ಲಿ ಮುಳುಗಿ ಮೂವರು ಸಾವಿಗೀಡಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ಸಮೀಪದ ಮಂಗಲ ಗ್ರಾಮದ ಬಳಿ ವಿಸಿ ನಾಲೆಯಲ್ಲಿ ಈಜಲು ಹೋಗಿದ್ದ ನಾಗರಬಾವಿ ನಿವಾಸಿ ಮಹೇಂದ್ರ(32) ಹಾಗೂ ಆರ್.ಆರ್. ನಗರದ
ಮಹೇಶ್(30) ನಾಲೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಶವಕ್ಕಾಗಿ ಹುಡುಕಾಟ ಮಾಡಲಾಗುತ್ತಿದೆ.
ಇಬ್ಬರೂ ನಿನ್ನೆ ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದರು ಎಂದು ಹೇಳಲಾಗಿದ್ದು, ಇಂದು ಈಜಲು ಹೋಗಿ ನೀರು ಪಾಲಾಗಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಶವಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.
ಇನ್ನು ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದ ಬಳಿಯ ರಾಮಸ್ವಾಮಿ ನಾಲೆಯಲ್ಲಿ ಈಜಲು ಹೋಗಿದ್ದ ಮತ್ತೊಬ್ಬ ಯುವಕ ಸಾವಿಗೀಡಾಗಿದ್ದು, ಈತನೂ ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದ ಎನ್ನಲಾಗಿದೆ.
ಮೃತ ಯುವಕ ಮೈಸೂರು ಜಿಲ್ಲೆ ಕೊಡಗಹಳ್ಳಿಯ ಯಶ್ವಂತ್(20) ಎಂದು ಗುರುತಿಸಲಾಗಿದ್ದು, ಅರಕೆರೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.