ETV Bharat / state

ಹೊಸ ಕಾಳಜಿಯೊಂದಿಗೆ ಪರಿಸರ ಪ್ರೀತಿ ಹಂಚುತ್ತಿದೆ ಮಂಡ್ಯದ ಈ ಸಂಸ್ಥೆ

ಪರಿಸರ ರೂರಲ್ ಡೆವಲೆಪ್ಮೆಂಟ್ ಸಂಸ್ಥೆ ಹೊಸ ಕಾಳಜಿಯೊಂದಿಗೆ ಪರಿಸರ ಪ್ರೀತಿಯನ್ನು ಜಿಲ್ಲೆಗೆ ಹಂಚುತ್ತಿದೆ. ಕೊರೊನಾ ಸಮಯದಲ್ಲಿ ರಕ್ತದಾನಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದು ಈವರೆಗೂ 1500ಕ್ಕೂ ಹೆಚ್ಚು ಗಿಡಗಳನ್ನು ರಕ್ತದಾನಿಗಳಿಗೆ ಉಚಿತವಾಗಿ ನೀಡಿದೆ..

author img

By

Published : Jul 24, 2020, 7:44 PM IST

This organization of Mandya is sharing environmental love with new concerns
ಹೊಸ ಕಾಳಜಿಯೊಂದಿಗೆ ಪರಿಸರ ಪ್ರೀತಿ ಹಂಚುತ್ತಿದೆ ಮಂಡ್ಯದ ಈ ಸಂಸ್ಥೆ

ಮಂಡ್ಯ: ಕೊರೊನಾ ಕಂಟಕದ ನಡುವೆಯೂ ಪರಿಸರ ಸಂಸ್ಥೆಯೊಂದು ಪರಿಸರ ಪ್ರೀತಿ ಹಂಚುತ್ತಿದೆ. ರಕ್ತದಾನ ಮಾಡಿ ದೊಡ್ಡತನ ಮೆರೆಯುವ ರಕ್ತದಾನಿಗಳಿಗೆ ಗಿಡಗಳನ್ನು ಹಂಚುವ ಮೂಲಕ ಪರಿಸರ ಕಾಳಜಿ ಜೊತೆಗೆ ರಕ್ತದಾನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಸಂಸ್ಥೆಗೆ ಹಿನ್ನೆಲೆಯಾಗಿ ನಿಂತಿದೆ ಅರಣ್ಯ ಇಲಾಖೆ.

ಮಂಡ್ಯದ ಪರಿಸರ ರೂರಲ್ ಡೆವಲೆಪ್ಮೆಂಟ್ ಸಂಸ್ಥೆ ಹೊಸ ಕಾಳಜಿಯೊಂದಿಗೆ ಪರಿಸರ ಪ್ರೀತಿಯನ್ನು ಜಿಲ್ಲೆಗೆ ಹಂಚುತ್ತಿದೆ. ಕೊರೊನಾ ಸಮಯದಲ್ಲಿ ರಕ್ತದಾನಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದು ಈವರೆಗೂ 1500ಕ್ಕೂ ಹೆಚ್ಚು ಗಿಡಗಳನ್ನು ರಕ್ತದಾನಿಗಳಿಗೆ ಉಚಿತವಾಗಿ ನೀಡಿದೆ.

ಮಿಮ್ಸ್‌ನ ರಕ್ತ ನಿಧಿಯಲ್ಲಿ ಉಚಿತವಾಗಿ ರಕ್ತ ನೀಡುವ ದಾನಿಗಳಿಗೆ ಶ್ರೀಗಂಧ, ರಕ್ತ ಚಂದನ, ಕರಿಬೇವು, ಹೊಂಗೆ, ಮಲ್ಲಿಗೆ, ಹೊನ್ನೇರು, ಸೀಬೆ, ಮಾವು ಹೀಗೆ ವಿವಿಧ ಬಗೆಯ ಗಿಡಗಳನ್ನು ನೀಡಿದೆ. ಕೊರೊನಾ ಸಮಯದಲ್ಲಿ ಕೆಲವರು ರಕ್ತದಾನ ಮಾಡಲು ಭಯ ಬೀಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರೋತ್ಸಾಹ ನೀಡುವ ಹಾಗೂ ರಕ್ತದಾನಿಗಳಿಗೆ ಉತ್ತೇಜನ ನೀಡಲು ಈ ಗಿಡಗಳನ್ನು ಕೊಡಲಾಗುತ್ತಿದೆ. ಸಂಸ್ಥೆಯ ಕಾರ್ಯಕ್ಕೆ ರಕ್ತದಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.