ಮಂಡ್ಯ : ಕೊರೊನಾ ಪ್ರಕರಣ ಒಂದು ಕಡೆ ಹೆಚ್ಚಾಗುತ್ತಿದ್ರೂ ಮತ್ತೊಂದೆಡೆ ಅಷ್ಟೇ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ.
ಇಂದು ಜಿಲ್ಲೆಯಲ್ಲಿ 30 ಸೋಂಕಿತರು ಕಂಡು ಬಂದ್ರೆ 42 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಗುಣಮುಖರಾದ ಎಲ್ಲರಿಗೂ ಸ್ಥಳೀಯ ಆಡಳಿತ ಸ್ವಾಗತ ಕೋರಿವೆ. ಜಿಲ್ಲೆಯಲ್ಲಿ ಒಟ್ಟು 718 ಪ್ರಕರಣ ದಾಖಲಾಗಿವೆ.
505 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 213 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.