ಮಂಡ್ಯ: ನಾನು ಈಗಾಗಲೇ ಪಕ್ಷ ಕಟ್ಟಿದ್ದೇನೆ, ಈಗ ಪಕ್ಷ ಕಟ್ಟುವ ಅವಶ್ಯಕತೆ ನನಗಿಲ್ಲ. ನಾನೀಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ನಾನು ಅಪ್ಪಟ ಕಾಂಗ್ರೆಸ್ಸಿಗನಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಡಿಕೆ ಮಾತಿಗೆ ಪ್ರತಿಕ್ರಿಯೆ ನೀಡಿದರು.
ಮಂಡ್ಯಕ್ಕೆ ಆಗಮಿಸುವ ವೇಳೆ ಮದ್ದೂರಿನ ಶಿವಪುರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಪಕ್ಷದಲ್ಲಿರುವ ಕಾರಣ ಬೇರೆ ಪಕ್ಷ ಕಟ್ಟೋ ಅವಶ್ಯಕತೆ ಇಲ್ಲ, ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷ ಕಟ್ಟಿ ತೋರಿಸಲಿ ಎಂದು ತಿರುಗೇಟು ನೀಡಿದರು.
ಮದ್ದೂರಿನ ಶಿವಪುರದ ಬಳಿಯ ಮದ್ದೂರು ಟಿಫಾನೀಸ್ ಸೆಂಟರ್ ಬಳಿ ಕಾರಿನಲ್ಲೆ ಕುಳಿತು ಮದ್ದೂರು ವಡೆ ಸೇವಿಸಿ ಟೀ ಕುಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮದ್ದೂರು ವಡೆಯ ರುಚಿಗೆ ಮನಸೋತರು.