ETV Bharat / state

OLXನಲ್ಲಿ ಜಾಹೀರಾತು ನೀಡಿದ ಬೈಕ್‌ಗಳ ಕಳ್ಳತನ: ಚಾಲಾಕಿ ಖದೀಮ ಪೊಲೀಸರ ಅತಿಥಿ - ಮಂಡ್ಯ ಅಪರಾಧ ಸುದ್ದಿ

ಓಎಲ್​ಎಕ್ಸ್​ ತಾಣದಲ್ಲಿ ಮಾರಾಟ ಮಾಡುವ ಸಲುವಾಗಿ ಜಾಹೀರಾತು ನೀಡುತ್ತಿದ್ದ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸಿದ್ದಾರೆ.

ಚಾಲಾಕಿ ಖದೀಮ ಈಗ ಪೊಲೀಸರ ಅತಿಥಿ
ಚಾಲಾಕಿ ಖದೀಮ ಈಗ ಪೊಲೀಸರ ಅತಿಥಿ
author img

By

Published : Oct 13, 2020, 12:46 PM IST

Updated : Oct 13, 2020, 2:11 PM IST

ಮಂಡ್ಯ: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಖದೀಮನೋರ್ವ ಓಎಲ್​ಎಕ್ಸ್​ನಲ್ಲಿ ಮಾರಾಟದ ಜಾಹೀರಾತು ನೀಡುತ್ತಿದ್ದ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ. ಸದ್ಯ ಈತನನ್ನು ಕೆ.ಆರ್.ಪೇಟೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಹೆಮ್ಮನಹಳ್ಳಿಯ ಗ್ರಾಮದ ರಾಕೇಶ್ ಬಂಧಿತ ಆರೋಪಿ. ಈತ ಓಎಲ್​ಎಕ್ಸ್​ನಲ್ಲಿ ಜಾಹೀರಾತು ನೋಡಿ ಖರೀದಿ ನೆಪದಲ್ಲಿ ಮಾಲೀಕರ ಬಳಿ ತೆರಳಿ ಅನುಮಾನ ಬಾರದ ರೀತಿಯಾಗಿ ವರ್ತಿಸುತ್ತಿದ್ದ. ಬಳಿಕ ಚಾಲಕಿತನದಿಂದ ಬೈಕ್ ಕದ್ದು ಪರಾರಿಯಾಗುತ್ತಿದ್ದನಂತೆ. ಟ್ರಯಲ್‌ಗೆಂದು ಬೈಕ್ ಪಡೆದು ಬಳಿಕ ನಾಪತ್ತೆಯಾಗಿ ಬಿಡುತ್ತಿದ್ದ. ಹೀಗೆ ಪಡೆದ ಬೈಕ್‌ಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ.

ಈತನಿಂದ ಐದು ಲಕ್ಷ ರೂಪಾಯಿ ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಜೈಲು ಪಾಲಾಗಿದ್ದಾ‌ನೆ.

Last Updated : Oct 13, 2020, 2:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.