ಮಂಡ್ಯ: ಗ್ರಾಮೀಣ ಸೊಗಡಿನ ಹಬ್ಬ ನೋಡಲು ಚಂದ, ಆಚರಣೆಯೂ ಅಂದ. ಅದ್ರಲ್ಲೂ ರಂಗ ಕುಣಿತ ಇನ್ನೂ ವಿಶೇಷ. ನಶಿಸಿ ಹೋಗುತ್ತಿರುವ ಕಲೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಈ ಗ್ರಾಮ ದೇವತೆಗಳ ಹಬ್ಬವೇ ಸಾಕ್ಷಿ.
ಕೃಷ್ಣರಾಜಪೇಟೆ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ರಂಗದ ಹಬ್ಬ ಸಂಭ್ರಮದಿಂದ ನಡೆಯಿತು. ಗ್ರಾಮಸ್ಥರು ರಂಗ ಕುಣಿತ ಮಾಡಿ ದೇವಿಗೆ ನೃತ್ಯಸೇವೆ ಸಲ್ಲಿಸಿದರು. ಹೇಮಗಿರಿಯ ಬೆಟ್ಟದ ತಪ್ಪಲಿನಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಪವಿತ್ರ ಹೇಮಾವತಿ ನದಿಯ ನೀರಿನಲ್ಲಿ ದೇವಿಗೆ ವಿಶೇಷ ಪುಣ್ಯ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಲಾಯ್ತು. ಬಳಿಕ ಅದ್ದೂರಿಯಾಗಿ ಮೆರವಣಿಗೆ ನಡೆಸಿ ದೇವಿಯನ್ನು ಗ್ರಾಮಕ್ಕೆ ಕೊಂಡೊಯ್ಯಲಾಯಿತು.
ಮೂರು ದಿನಗಳ ಕಾಲ ಹೊನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿಯ ವಿಶೇಷ ಉತ್ಸವ, ಹಸಿರುಬಂಡಿ, ಬಾಯಿಬೀಗ, ರಂಗದ ಕುಣಿತ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ.