ETV Bharat / state

ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ರಸ್ತೆಯಲ್ಲಿ ನಿಂತು ಕೆಲಸ ಮಾಡಿ ಗೊತ್ತಾಗುತ್ತೆ: ವ್ಯಕ್ತಿ - ಪೊಲೀಸರ ನಡುವೆ ವಾಗ್ವಾದ - clash between the man and police in mandya

ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ನೀವೇನು ಬಂಡವಾಳ ಹಾಕಿದ್ದೀರಾ? ಎಂದು ವ್ಯಕ್ತಿಯೋರ್ವ ಆವಾಜ್ ಹಾಕಿದ್ದಾನೆ. ಅದಕ್ಕೆ ನೀವು ರಸ್ತೆಯಲ್ಲಿ ನಿಂತು ಕೆಲಸ ಮಾಡಿ ಗೊತ್ತಾಗುತ್ತೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

The clash  between the man and police in mandya
ವ್ಯಕ್ತಿ-ಪೊಲೀಸರ ನಡುವೆ ವಾಗ್ವಾದ
author img

By

Published : May 8, 2021, 10:52 PM IST

ಮಂಡ್ಯ: ಅನಾವಶ್ಯಕವಾಗಿ ಓಡಾಡುತ್ತಿದ್ದವರ ಬೈಕ್ ಕೀ ಕಿತ್ತುಕೊಂಡ ಹಿನ್ನೆಲೆ, ಪೊಲೀಸರನ್ನೇ ವ್ಯಕ್ತಿಯೋರ್ವ ಪ್ರಶ್ನಿಸಿ ಆವಾಜ್ ಹಾಕಿದ್ದಾನೆ.

ವ್ಯಕ್ತಿ-ಪೊಲೀಸರ ನಡುವೆ ವಾಗ್ವಾದ

ಮಂಡ್ಯದ ನೂರಡಿ ರಸ್ತೆಯಲ್ಲಿ ಘಟನೆ ನಡೆದಿದೆ. ಯಾಕ್ರಿ ಬೈಕ್ ಕೀ ತಗೊಳ್ತೀರಾ ಎಂದು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ನೀವೇನು ಬಂಡವಾಳ ಹಾಕಿದ್ದೀರಾ? ಎಂದು ಆವಾಜ್ ಹಾಕಿದ್ದಾನೆ. ಅದಕ್ಕೆ ನೀವು ರಸ್ತೆಯಲ್ಲಿ ನಿಂತು ಕೆಲಸ ಮಾಡಿ ಗೊತ್ತಾಗುತ್ತೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಹೊಡೆತ : ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕ ರಸ್ತೆಯಲ್ಲಿ ಹಣ್ಣು ಮಾರಾಟ

ಪೊಲೀಸರು ಮತ್ತು ವ್ಯಕ್ತಿಯ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ಆ ವೇಳೆಗೆ ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪಿಎಸ್​ಪಿ ವೆಂಕಟೇಶ್ ನೀನ್ಯಾಕೆ ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸ್ತಾರೆ. ಆಗಲೂ ತನ್ನ ಮಾತನ್ನು ಮುಂದುವರೆಸಿದ ಕಾರಣ ವ್ಯಕ್ತಿಯನ್ನು ಜೀಪ್​ನಲ್ಲಿ ಹತ್ತಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.