ಮಂಡ್ಯ: ಮಾಯವಾಗಿದ್ದ ಪುರಾತನ ಶಿವಲಿಂಗ ದೇವಾಲಯದ ಗರ್ಭಗುಡಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.
ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ಶಿವಲಿಂಗ ಮಾಯವಾಗಿತ್ತು. ದುಷ್ಕರ್ಮಿಗಳು ಶಿವಲಿಂಗ ಕಳವು ಮಾಡಿದ್ದಾರೆಂದು ಗ್ರಾಮಸ್ಥರು ಶಂಕಿಸಿ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದ್ರೆ ಇಂದು ದೇವಾಲಯದ ಬಳಿಗೆ ಹೋಗಿದ್ದ ಗ್ರಾಮಸ್ಥರಿಗೆ ಮೊದಲು ಶಿವಲಿಂಗವಿದ್ದ ಸ್ಥಳದಲ್ಲೇ ಪ್ರತ್ಯಕ್ಷವಾಗಿರುವುದನ್ನು ಕಂಡು ಆಶ್ಚರ್ಯಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಜನ ವಿರೋಧಿ ಚಟುವಟಿಕೆಗೆ ನನ್ನ ಸಮ್ಮತಿ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಕೆಲ ಹೊತ್ತಿನಲ್ಲೇ ಮತ್ತೆ ಶಿವಲಿಂಗ ಪ್ರತ್ಯಕ್ಷವಾಗಿರುವುದರಿಂದ ಗ್ರಾಮಸ್ಥರು ಇದನ್ನು ದೇವರ ಪವಾಡ ಎನ್ನುತ್ತಿದ್ದಾರೆ. ಹಲ್ಲೇಗೆರೆ ಗ್ರಾಮದ ಹೊರ ಭಾಗದಲ್ಲಿರುವ ಕಾಶಿ ವಿಶ್ವನಾಥ ದೇವಾಲಯ 450 ವರ್ಷಗಳ ಇತಿಹಾಸ ಹೊಂದಿದ್ದು, ಈ ಘಟನೆ ಪವಾಡ ಎಂದು ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.