ಮಂಡ್ಯ: ಲಂಚಕ್ಕಾಗಿ ಗ್ರಾಮ ಪಂಚಾಯತ ಪಿಡಿಒಗಳಿಗೆ ಕಿರುಕುಳ ನೀಡಿ, ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚ ಕೊಡದಿದ್ದಲ್ಲಿ ಇಲ್ಲಸಲ್ಲದ ಕ್ಯಾತೆ ತೆಗೆದು ಮೇಲಾಧಿಕಾರಿಗೆ ದೂರು ಕೊಡುವುದಾಗಿ ಬೆದರಿಸುತ್ತಿದ್ದ ಆರೋಪದ ಆಧಾರ ಮೇಲೆ ಶ್ರೀರಂಗಪಟ್ಟಣದ ತಾಲೂಕು ಪಂಚಾಯತ್ ಇಒ ಬೈರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಶ್ರೀರಂಗಪಟ್ಟಣ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯ ಹಣದ ದಾಹಕ್ಕೆ ಬೇಸತ್ತ ಚಾನಲ್ ತಾಲೂಕು ವ್ಯಾಪ್ತಿಯ ಪಿಡಿಒಗಳು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದರು.
ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಶೇ. 4ರಿಂದ ಶೇ.20 ಪರ್ಸಂಟೇಜ್ ಹಣಕ್ಕಾಗಿ ಇಒ ಪೀಡಿಸುತ್ತಿದ್ದರಂತೆ. ಪರ್ಸೆಂಟೇಜ್ ನೀಡಲಿಲ್ಲ ಅಂದ್ರೆ ಬಿಲ್ ಮಂಜೂರು ಮಾಡಲಿಲ್ಲವಂತೆ. ಇ-ಸ್ವತ್ತು ಮಾಡಿಸುವವರಿಂದಲೂ ಹಣ ಪಡೆದು ತನಗೂ ಕೊಡಿ ಎಂದು ಪಿಡಿಒಗಳಿಗೆ ಇಒ ತಾಕೀತು ಮಾಡಿದ್ದರಂತೆ. ಇಒ ಬೈರಪ್ಪರ ಕಿರುಕುಳಕ್ಕೆ ಬೇಸತ್ತ ಪಿಡಿಒಗಳು ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಕೊಟ್ಟಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬೈರಪ್ಪ ಪರ್ಸಂಟೇಜ್ ಕೇಳುತ್ತಿರುವ ಆಡಿಯೋ -ವಿಡಿಯೋ ವೈರಲ್ ಆಗಿದೆ.
ಮೇಲ್ನೋಟಕ್ಕೆ ಆರೋಪ ಸಾಬೀತು.. ಇಒ ಲಂಚಕ್ಕಾಗಿ ಪಿಡಿಒಗಳನ್ನು ಪೀಡಿಸಿದ ಪ್ರಕರಣ ಕುರಿತು ಮಂಡ್ಯ ಜಿಪಂ ಸಿಒಒ ದಿವ್ಯ ಪ್ರಭು ಪ್ರತಿಕ್ರಿಯಿಸಿ, ಈ ಬಗ್ಗೆ ಪಿಡಿಒಗಳು ದೂರು ಕೊಟ್ಟಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ತನಿಖೆ ನಡೆಸಿ ವರದಿ ನೀಡಿದ್ದಾರೆ. ಮೇಲ್ನೋಟಕ್ಕೆ ಹಣಕ್ಕಾಗಿ ಇಒ ಒತ್ತಡ ಹಾಕಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ.
ಆಡಿಯೋ-ವಿಡಿಯೋ ಸಾಕ್ಷಿ ಎಲ್ಲವನ್ನೂ ಸೇರಿಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಇಒಗೆ ಅವಮಾನ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಸಿಇಒ ಬಗ್ಗೆಯೂ ಆಡಿಯೋದಲ್ಲಿ ಆರೋಪ ಮಾಡಿದ್ದಾರೆ. ಅವರು ಗ್ರೂಪ್ ಎ ಹಂತದ ಅಧಿಕಾರಿ ಆಗಿರೋದರಿಂದ ನಾನು ಕ್ರಮ ತೆಗೆದುಕೊಳ್ಳಲು ಆಗಲ್ಲ. ಸರ್ಕಾರವೇ ಕ್ರಮ ಜರುಗಿಸುತ್ತೆ ಎಂದಿದ್ದಾರೆ.
ಓದಿ: ಪಿಡಿಒಗಳಿಗೆ ಕಿರುಕುಳ ನೀಡಿದ ಇಒ ಬೈರಪ್ಪರನ್ನು ಅಮಾನತು ಮಾಡಲಾಗಿದೆ: ಸಚಿವ ಕೆ.ಎಸ್. ಈಶ್ವರಪ್ಪ