ಮಂಡ್ಯ: ಆಕ್ಸಿಜನ್ ಅಭಾವ ತಪ್ಪಿಸಲು ಸಂಸದೆ ಸುಮಲತಾ ಅಂಬರೀಶ್ ಸಹಾಯಹಸ್ತ ಚಾಚಿದ್ದಾರೆ. 2000 ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್ ಕಳುಹಿಸಿಕೊಡುವ ಮೂಲಕ ಸುಮಲತಾ ಅಂಬರೀಶ್ ನುಡಿದಂತೆ ನಡೆದಿದ್ದಾರೆ.

ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಸಿಲಿಂಡರ್‌ಗಳನ್ನು ರವಾನೆ ಮಾಡಲಾಗಿದೆ. ಪ್ರತಿದಿನ ತಮ್ಮ ಸ್ವಂತ ಹಣದಲ್ಲಿ ಮಂಡ್ಯ ಜಿಲ್ಲೆಗೆ 2000 ಲೀಟರ್ ಆಕ್ಸಿಜನ್ ನೀಡುವುದಾಗಿ ಕೋವಿಡ್ ನಿರ್ವಹಣೆ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭರವಸೆ ನೀಡಿದ್ದರು. ಎಂಪಿ ಫಂಡ್ ಇಲ್ಲದ ಕಾರಣ ಸ್ವಂತ ಹಣದಲ್ಲಿ ನಿತ್ಯ 2000 ಲೀಟರ್ ಆಕ್ಸಿಜನ್ ಕೊಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ: ವಿಜಯಪುರ: ರೋಗಿಯ ಸಂಬಂಧಿಕರು ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ
ಕೊಟ್ಟ ಮಾತಿನಂತೆ 2000 ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್‌ಗಳನ್ನು ಸಂಸದೆ ಕಳುಹಿಸಿಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.