ETV Bharat / state

ಡಿ.ಸಿ. ತಮ್ಮಣ್ಣ ಸಚಿವರಾಗಲು ಯಾರು ಕಾರಣ: ಗುಟ್ಟು ರಟ್ಟು ಮಾಡಿದ್ರು ಸುಮಲತಾ - ಅಂಬರೀಷ್

ಅಂಬರೀಶ್ ಏನು ಮಾಡಿಲ್ಲ ಅಂತಾರೆ. ಅವರು ಏನು ಮಾಡಿದ್ದಾರೆ ಅಂತಾ ಅವ್ರ ಆತ್ಮಸಾಕ್ಷಿ ಕೇಳಿ‌ಕೊಳ್ಳಲ್ಲಿ. ಇವತ್ತು ಸಚಿವರಾಗಿ ಅಧಿಕಾರ‌ ನಡೆಸ್ತಿರೋದಕ್ಕೇ ಯಾರು ಕಾರಣ ಅಂತಾ ಕೇಳಿ ಎಂದು ಸುಮಲತಾ ಅವರು ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಸುಮಲತಾ ಅಂಬರೀಶ್
author img

By

Published : Apr 2, 2019, 5:02 PM IST

ಮಂಡ್ಯ: ಮದ್ದೂರು ಕ್ಷೇತ್ರದ ಸಚಿವ ಡಿ.ಸಿ. ತಮ್ಮಣ್ಣ ಸಚಿವರಾಗಲು ಅಂಬರೀಶ್ ಕಾರಣವಂತೆ. ಈಗ ಅನ್ನ ಉಂಡ ಮನೆಗೆ ಏನು ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ ಎಂದು ಸಚಿವ ತಮ್ಮಣ್ಣಗೆ ಸುಮಲತಾ ಅಂಬರೀಶ್ ಟಾಂಗ್ ನೀಡಿದರು.

ಸುಮಲತಾ ಅಂಬರೀಶ್

ನಗರಕೆರೆಯಲ್ಲಿ ಪ್ರಚಾರದ ವೇಳೆ ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದ ಅವರು, ಅಂಬರೀಶ್ ಏನು ಮಾಡಿಲ್ಲ ಅಂತಾರೆ. ಏನು ಮಾಡಿದ್ದಾರೆ ಅಂತಾ ಅವ್ರ ಆತ್ಮಸಾಕ್ಷಿ ಕೇಳಿ‌ಕೊಳ್ಳಲಿ. ಇವತ್ತು ಸಚಿವರಾಗಿ ಅಧಿಕಾರ‌ ನಡೆಸ್ತಿರೋದಕ್ಕೇ ಯಾರು ಕಾರಣ ಅಂತಾ ಕೇಳಿ. ಅವತ್ತು ಅಂಬಿ ಮನೆಯಲ್ಲಿ ಕುಳಿತು ಸಚಿವ ಸ್ಥಾನ ಸಿಗಲಿಲ್ಲ ಅಂತಾ ಚಪಡಿಸುತ್ತಿದ್ದಾಗ, ಅಂಬಿ ಯಾರಿಗೆ ಫೋನ್ ಮಾಡಿ ಇವರನ್ನು ಸಚಿವರನ್ನಾಗಿ ಮಾಡಿದರು ಅಂತಾ ನೆನಪಿಸಿಕೊಳ್ಳಲಿ ಎಂದು ಗುಡುಗಿದರು.

ಸಚಿವರನ್ನು ಚಿಕ್ಕವಯಸ್ಸಿನಲ್ಲಿ ಓದಿಸಿ ಬೆಳೆಸಿದ್ದು ನಮ್ಮ ಮಾವ ಹುಚ್ಚೇಗೌಡರು. ಅನ್ನ ಹಾಕಿ, ಓದಿಸಿ‌, ಬೆಳೆಸಿದ ಮನೆಗೆ ಈಗ ಇವರು ಏನೆಲ್ಲಾ‌ ಮಾಡುತ್ತಿದ್ದಾರೆ. ಸ್ವಲ್ಪವೂ ಕೃತಜ್ಞತೆ ಇಲ್ಲದ ಮನುಷ್ಯ. ಇಷ್ಟೆಲ್ಲ ವಯಸ್ಸಾಗಿ ಅನುಭವ ಪಡೆದಿದ್ದರೂ ಹೆಣ್ಮಕ್ಕಳ ಬಗ್ಗೆ ಹೀಗೆ ಹಗುರವಾಗಿ ಮಾತನಾಡ್ತಾರೆ. ಇವತ್ತು ಅಧಿಕಾರಕ್ಕಾಗಿ ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ಸಂಬಂಧದಲ್ಲಿ ಅಂಬರೀಶ್ ಅಣ್ಣನಾಗಬೇಕಿದ್ದು, ಈಗ ಅದೆಲ್ಲವನ್ನು ಮರೆತಿದ್ದಾರೆ ಎಂದು ಸಾರಿಗೆ ಸಚಿವರ ಹೀಯಾಳಿಕೆ ಮಾತಿಗೆ ಸುಮಲತಾ ತಿರುಗೇಟು ಕೊಟ್ಟರು.

Intro:ಮಂಡ್ಯ: ಮದ್ದೂರು ಕ್ಷೇತ್ರದ ಶಾಸಕ ಡಿ ಸಿ ತಮ್ಮಣ್ಣ ಮಂತ್ರಿಯಾಗಲು ಅಂಬರೀಷ್ ಕಾರಣವಂತೆ. ಈಗ ಅನ್ನ ಉಂಡ ಮನೆಗೆ ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಿಲ್ಲವೆ ಎಂದು ಸಚಿವ ತಮ್ಮಣ್ಣಗೆ ಸುಮಲತಾ ಅಂಬರೀಶ್ ಟಾಂಗ್ ನೀಡಿ ಜನತೆ ಮುಂದೆ ಪ್ರಶ್ನೆ ಮಾಡಿದರು.Body:ನಗರಕೆರೆಯಲ್ಲಿ ಪ್ರಚಾರದ ವೇಳೆ ಸಚಿವ ಡಿ.ಸಿ ತಮ್ಮಣ್ಣ ವಿರುದ್ದ ಸುಮಲತಾ ವಾಗ್ಧಾಳಿ ಮಾಡಿ, ಅಂಬರೀಶ್ ಏನು ಮಾಡಿಲ್ಲ ಅಂತಾರೆ, ಏನು ಮಾಡಿದ್ದಾರೆ ಅಂತಾ ಅವ್ರ ಆತ್ಮಸಾಕ್ಷಿ ಕೇಳಿ‌ ಕೊಳ್ಳಲ್ಲಿ. ಇವತ್ತು ಸಚಿವರಾಗಿ ಅಧಿಕಾರ‌ ನಡೆಸ್ತಿರೋದಕ್ಕೇ ಯಾರು ಕಾರಣ ಅಂತಾ ಕೇಳಿ. ಅವತ್ತು ಅಂಬಿ ಮನೆಯಲ್ಲಿ ಕುಳಿತು ಮಂತ್ರಿ ಸ್ಥಾನ ಸಿಗಲಿಲ್ಲ ಅಂತಾ ಚಪಡಿಸ್ತಿದ್ದಾಗ ಅಂಬಿ ಯಾರಿಗೆ ಫೋನ್ ಮಾಡಿ ಇವ್ರನ್ನು ಮಂತ್ರಿ ಮಾಡಿದ್ರು ಅಂತಾ ನೆಸಸಿಕೊಳ್ಳಲ್ಲಿ ಎಂದು ಸಲಹೆ ನೀಡಿದರು.
ಸಚಿವರನ್ನು ಚಿಕ್ಕವಯಸ್ಸಿನಲ್ಲಿ ಓದಿಸಿ ಬೆಳೆಸಿದ್ದು ನಮ್ಮ ಮಾವ ಹುಚ್ಚೇಗೌಡ. ಚಿಕ್ಕ ವಯಸ್ಸಿನಲ್ಲಿ ಅವರನ್ನು ಮಕರೆ ತಂದು ಬೆಳೆಸಿ ಓದಿಸಿದ್ದು ಯಾರು ಅಂತಾ ಅವರನ್ನೆ ಕೇಳಿ. ಅನ್ನ ಹಾಕಿ ಓದಿಸಿ‌ಬೆಳೆಸಿದ ಮನೆಗೆ ಈಗ ಇವರು ಏನೆಲ್ಲಾ‌ ಮಾಡ್ತಿದ್ದಾರೆ. ಸ್ವಲ್ಪವು ಕೃತಜ್ಞತೆ ಇಲ್ಲದ ಮನುಷ್ಯ, ಇಷ್ಟೆಲ್ಲ ವಯಸ್ಸಾಗಿ ಅನುಭವ ಪಡೆದಿದ್ರು ಹೆಂಗಸರ ಬಗ್ಗೆ ಹೀಗೆ ಮಾತನಾಡ್ತಾರೆ ಎಂದರು.
ಇವತ್ತು ಅಧಿಕಾರಕ್ಕಾಗಿ ಸಂಬಂಧಗಳನ್ನು ಕಳೆದುಕೊಂಡಿದ್ದಾರೆ. ಸಂಬಂಧದಲ್ಲಿ ಅಂಬರೀಶ್ ಅಣ್ಣನಾಗಬೇಕಿದ್ದು ಈಗ ಅವೆಲ್ಲವನ್ನು ಮರೆತಿದ್ದಾರೆ ಎಂದು ಸಾರಿಗೆ ಸಚಿವರ ಹೀಯಾಳಿಕೆ ಮಾತಿಗೆ ತಿರುಗೇಟು ಕೊಟ್ಟರು.
ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.