ಮಂಡ್ಯ: ಕೊರೊನಾ ಚಿಕಿತ್ಸೆ ವಿಚಾರದಲ್ಲಿ ಜಿಲ್ಲಾಡಳಿತ ಚಿಕಿತ್ಸಾ ವಿಧಾನ ಸೇರಿದಂತೆ ಮೂಲ ಸೌಕರ್ಯಗಳ ವಿಚಾರದಲ್ಲೂ ಸಮಸ್ಯೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ಹೇಳಿದ್ದಾರೆ.
ಎಲ್ಲಾ ಕೋವಿಡ್ ಸೆಂಟರ್‌ಗಳಲ್ಲೂ ತಲಾ 20 ಆಕ್ಸಿಜನ್ ಸಿಲಿಂಡರ್ ಶೇಖರಣೆ ಮಾಡಲಾಗುವುದು. ಕೊರೊನಾ ಸೋಂಕಿತರಿಗೆ ಸಮಸ್ಯೆ ಆಗದಂತೆ ಆಕ್ಸಿಜನ್ ನೀಡಲು ಮಿಮ್ಸ್‌ನಲ್ಲಿ ಹೆಚ್ಚುವರಿಯಾಗಿ 150 ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ತಾಲೂಕು ಕೋವಿಡ್ ಸೆಂಟರ್‌ಗಳಲ್ಲೂ ಆಕ್ಸಿಜನ್ ಬೆಡ್ ರೆಡಿ ಮಾಡಲಾಗುತ್ತಿದೆ.
ಜೊತೆಗೆ ಹೆಚ್ಚುವರಿಯಾಗಿ ತಲಾ 20 ಸಿಲಿಂಡರ್‌ಗಳ ಶೇಖರಣೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿವೆ. ಒಟ್ಟಿನಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.