ETV Bharat / state

ಜೆಡಿಎಸ್‌ನ ಇಬ್ಬರು ಮನ್‌ಮುಲ್ ನಿರ್ದೇಶಕರ ಮೇಲೆ ಅನರ್ಹತೆಯ ತೂಗುಗತ್ತಿ: ಕಾರಣ?! - State government notice

ಮನ್​ಮುಲ್​ನಲ್ಲಿ ಜೆಡಿಎಸ್​ನ ಇಬ್ಬರು ನಿರ್ದೇಶಕರ ಸದಸ್ಯತ್ವ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೆಚ್.ಡಿ. ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡಿದ್ದ, ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಹೆಚ್.ಟಿ. ಮಂಜುನಾಥ್ ಹಾಗೂ ನಾಗಮಂಗಲದ ಪ್ರಭಾವಿ ಜೆಡಿಎಸ್ ಮುಖಂಡ ನೆಲ್ಲಿಗೆರೆ ಬಾಲು ಅವರಿಗೆ ನೋಟಿಸ್​ ನೀಡಲಾಗಿದೆ.

ಜೆಡಿಎಸ್‌ನ ಇಬ್ಬರು ಮನ್‌ಮುಲ್ ನಿರ್ದೇಶಕರಿಗೆ ಅನರ್ಹತೆಯ ತೂಗುಗತ್ತಿ..!
author img

By

Published : Sep 19, 2019, 5:33 PM IST

ಮಂಡ್ಯ: ಮನ್​ಮುಲ್​ನಲ್ಲಿ ಜೆಡಿಎಸ್​ನ ಇಬ್ಬರು ನಿರ್ದೇಶಕರ ಸದಸ್ಯತ್ವ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೆ ನೋಟಿಸ್ ನೀಡಲಾಗಿದೆ.

State government notice to two  Mann Mul JDS directors
ಜೆಡಿಎಸ್‌ನ ಇಬ್ಬರು ಮನ್‌ಮುಲ್ ನಿರ್ದೇಶಕರ ಮೇಲೆ ಅನರ್ಹತೆಯ ತೂಗುಗತ್ತಿ..!

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡಿದ್ದ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಹೆಚ್.ಟಿ. ಮಂಜುನಾಥ್ ಹಾಗೂ ನಾಗಮಂಗಲದ ಪ್ರಭಾವಿ ಜೆಡಿಎಸ್ ಮುಖಂಡ ನೆಲ್ಲಿಗೆರೆ ಬಾಲು ಸದಸ್ಯತ್ವ ರದ್ದು ಮಾಡಲು ಸರ್ಕಾರ ಮುಂದಾಗಿದೆ.

ಹೆಚ್.ಟಿ. ಮಂಜುನಾಥ್ ಸಂಘದ ಬೈಲಾ ಪ್ರಕಾರ 180 ದಿನಗಳ ಕಾಲ ಡೈರಿಗೆ ಹಾಲು ನೀಡಿಲ್ಲ. ಹಾಗಾಗಿ ನಿಮ್ಮ ಸದಸ್ಯತ್ವನ್ನು ಏಕೆ ಅನರ್ಹ ಮಾಡಬಾರದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೋಟಿಸ್ ನೀಡಿದ್ದಾರೆ. ಇನ್ನು, ನೆಲ್ಲಿಗೆರೆ ಬಾಲು ಸಹೋದರ ಮುದ್ದೇಗೌಡ ಎಂಬುವರು ಸ್ಥಳೀಯ ಡೈರಿಯ ಕಾರ್ಯದರ್ಶಿಯಾಗಿದ್ದಾರೆ. ಮನ್​ಮುಲ್ ಚುನಾವಣೆಗೆ ಸ್ಪರ್ಧಿಸಬೇಕಾದರೆ, ಅಭ್ಯರ್ಥಿಯ ಹತ್ತಿರದ ಸಂಬಂಧಿಗಳು ಮನ್​ಮುಲ್​ನಲ್ಲಿ ನೌಕರರಾಗಿರಬಾರದು. ಆದರೆ ಬಾಲು ಸಹೋದರ ಡೈರಿ ಕಾರ್ಯದರ್ಶಿ ಆಗಿರುವುದನ್ನೇ ಮುಂದಿಟ್ಟುಕೊಂಡು ನೋಟಿಸ್ ನೀಡಿದ್ದು, ಇಬ್ಬರೂ ಸೆಪ್ಟಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇನ್ನು, ಸೆಪ್ಟಂಬರ್ 23ರಂದು ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಒಂದೊಮ್ಮೆ ಈ ಇಬ್ಬರೂ ಜೆಡಿಎಸ್ ಬೆಂಬಲಿತ ಸದಸ್ಯರ ಸದಸ್ಯತ್ವ ಅನರ್ಹಗೊಂಡರೆ ಜೆಡಿಎಸ್ ಕನಸು ನುಚ್ಚು ನೂರಾಗಲಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

Intro:ಮಂಡ್ಯ: ಮನ್ ಮುಲ್ ನಲ್ಲಿ ಜೆಡಿಎಸ್ ಕೋಟೆಯ ಒಂದೊಂದೇ ಕಲ್ಲುಗಳು ಅನರ್ಹತೆಯ ಹೆಸರಿನಲ್ಲಿ ಕಳೆದು ಹೋಗುತ್ತಿವೆ. ಇಬ್ಬರು ನಿರ್ದೇಶಕರ ಸದಸ್ಯತ್ವ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೇ ನೋಟಿಸ್ ನೀಡಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡಿದ್ದ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿರುವ ಎಚ್.ಟಿ. ಮಂಜುನಾಥ್ ಹಾಗೂ ನಾಗಮಂಗಲದ ಪ್ರಭಾವಿ ಜೆಡಿಎಸ್ ಮುಖಂಡರ ನೆಲ್ಲಿಗೆರೆ ಬಾಲು ಸದಸ್ಯತ್ವಕ್ಕೆ ಅನರ್ಹತೆಯ ತೂಗುಗತ್ತಿ ತೂಗುತ್ತಿದೆ.

ಎಚ್.ಟಿ. ಮಂಜುನಾಥ್ ಸಂಘದ ಬೈಲಾ ಪ್ರಕಾರ 180 ದಿನಗಳ ಕಾಲ ಡೈರಿಗೆ ಹಾಲು ನೀಡಿಲ್ಲ, ಹಾಗಾಗಿ ನಿಮ್ಮ ಸದಸ್ಯತ್ವನ್ನು ಏಕೆ ಅನರ್ಹ ಮಾಡಬಾರದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೋಟಿಸ್ ನೀಡಿದ್ದಾರೆ.

ಇನ್ನು ನೆಲ್ಲಿಗೆರೆ ಬಾಲು ಸಹೋದರ ಮುದ್ದೇಗೌಡ ಎಂಬವರು ಸ್ಥಳೀಯ ಡೈರಿಯ ಕಾರ್ಯದರ್ಶಿಯಾಗಿದ್ದಾರೆ. ಮನ್ ಮುಲ್ ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಅಭ್ಯರ್ಥಿಯ ಹತ್ತಿರದ ಸಂಬಂಧಿಗಳು ಡೈರಿ ಅಥವಾ ಮನ್ ಮುಲ್ ನಲ್ಲಿ ನೌಕರರಾಗಿರಬಾರದು. ಆದರೆ ಬಾಲು ಸಹೋದರ ಡೈರಿ ಕಾರ್ಯದರ್ಶಿ ಅಗಿರುವುದನ್ನೇ ಮುಂದಿಟ್ಟುಕೊಂಡು ಬಾಲುಗೂ ನೋಟಿಸ್ ನೀಡಿದ್ದು, ಇಬ್ಬರೂ ಸೆಪ್ಟಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇನ್ನು ಸೆಪ್ಟಂಬರ್ 23ರಂದು ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇದೆ. ಒಂದೊಮ್ಮೆ ಈ ಇಬ್ಬರೂ ಜೆಡಿಎಸ್ ಬೆಂಬಲಿತ ಸದಸ್ಯರ ಸದಸ್ಯತ್ವ ಅನರ್ಹಗೊಂಡರೆ ಜೆಡಿಎಸ್ ಕನಸು ನುಚ್ಚು ನೂರು ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆಗ ಮದ್ದೂರಿನ ಜೆಡಿಎಸ್ ಬೆಂಬಲಿತ ನಿರ್ದೇಶಕ, ಚಲುವರಾಯಸ್ವಾಮಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ಎಸ್.ಪಿ ಸ್ವಾಮಿಗೆ ದಾರಿ ಸುಗಮವಾಗಲಿದ್ದು, ಬಿಜೆಪಿಯೂ ಎಸ್.ಪಿ ಸ್ವಾಮಿಗೆ ಬೆಂಬಲವಾಗಿ ನಿಂತಿದೆ ಎಂದು ಹೇಳಲಾಗಿದೆ.

Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.