ಮಂಡ್ಯ: ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಪ್ರಾರ್ಥಿಸಿ ನಗರದ ಕಾಳಮ್ಮ ದೇವಸ್ಥಾನದಲ್ಲಿ ಬಿಎಸ್ವೈ ಅಭಿಮಾನಿ ಶಿವಕುಮಾರ್ ಆರಾಧ್ಯ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಪ್ರಾರ್ಥನೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಯಡಿಯೂರಪ್ಪ ಅವರಿಗೆ ಯಾವುದೇ ಸಂಕಷ್ಟವಾಗದಂತೆ, ಬಿಎಸ್ವೈ ಬದಲಾವಣೆ ಮಾಡದೇ ಅವರನೇ ಮುಂದುವರೆಸಲಿ ಎಂದು ಮಾಹಿತಿ ನೀಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇವೆ ಎಂದರು.
ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಬೇಕು. ಅವರ ಆಡಳಿತಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಶಕ್ತಿ ದೇವತೆಯ ದೇವಾಲಯದ ಮುಂಭಾಗ ಎಂಟು ದಿಕ್ಕುಗಳಿಗೂ ಈಡುಗಾಯಿ ಒಡೆಯುವ ಮೂಲಕ ದೇವರಿಗೆ ಕೇಳಿಕೊಂಡಿದ್ದೇನೆ ಎಂದು ಅಭಿಮಾನಿ ಶಿವಕುಮಾರ್ ಆರಾಧ್ಯ ತಿಳಿಸಿದರು.