ಮಂಡ್ಯ: ನಿಜವಾದ ಮಣ್ಣಿನ ಮಕ್ಕಳು ಯಾರು. ನಿಖಿಲ್ ಕುಮಾರಸ್ವಾಮಿನಾ ಅಥವಾ ನಟ ದರ್ಶನ್ ನಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ಇದಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸೋ ಬಗ್ಗೆ ಚರ್ಚೆ ನಡೆದಿದೆ.
![Nikil And Darshan](https://etvbharatimages.akamaized.net/etvbharat/images/2803051_431_7b7b2a9b-38f2-473c-9f1e-f248da879a94.png)
ಸೋಮವಾರ ಕುಮಾರಸ್ವಾಮಿ ಹಾಕಿದ ನಿಜವಾದ ಮಣ್ಣಿನ ಮಕ್ಕಳು ನಾವು ಎಂಬ ಹೇಳಿಕೆಗೆ ಈ ರೀತಿಯ ಪೋಸ್ಟ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ದರ್ಶನ್ ವರ್ಸಸ್ ನಿಖಿಲ್ಗೆ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸೋಣ ಎಂಬ ಸವಾಲಿನ ಸಂದೇಶ ಪ್ರಕಟವಾಗಿದೆ.
ಹಸುವಿನ ಹಾಲನ್ನು ಯಾರು ಹೆಚ್ಚಿಗೆ ಕರೆಯುತ್ತಾರೋ ಅವರೇ ನಿಜವಾದ ಮಣ್ಣಿನ ಮಕ್ಕಳು ಎಂಬ ಬಹಿರಂಗ ಸವಾಲು ಸಹ ಹಾಕಲಾಗಿದೆ. ಜೊತೆಗೆ ಸಿಎಂ ವಿರುದ್ಧವೂ ಆಕ್ರೋಶ ಹೊರ ಹಾಕಿರುವ ನೆಟ್ಟಿಗರು, ಕಳ್ಳೆತ್ತು ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.