ETV Bharat / state

ಸಿಎಂ‌ಗೆ ಕಪ್ಪು ಬಾವುಟ ತೋರಲು ಮುಂದಾಗಿದ್ದ ಹೋರಾಟಗಾರರು ಪೊಲೀಸ್‌ ವಶಕ್ಕೆ

ಕೆ.‌ಆರ್‌.ಎಸ್ ಅಣೆಕಟ್ಟೆ ಸುತ್ತಲು ಗಣಿಗಾರಿಕೆ ನಿಷೇಧಿಸುವಂತೆ ಸಾಮಾಜಿಕ ಹೋರಾಟಗಾರರು ಸರ್ಕಾರವನ್ನು ಆಗ್ರಹಿಸುತ್ತಾ ಬರುತ್ತಿದ್ದಾರೆ. ಆದ್ರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟಗಾರರು ಇಂದು ಸಿಎಂಗೆ ಕಪ್ಪು ಬಾವುಟ ತೋರಲು ಮುಂದಾಗಿದ್ದರು. ಈ ವಿಷಯ ತಿಳಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು.

Social Activist Arrested in Mandya
ಸಾಮಾಜಿಕ ಹೋರಾಟಗಾರರನ್ನು ಕರೆದೊಯ್ಯುತ್ತಿರುವ ಪೊಲೀಸರು
author img

By

Published : Aug 21, 2020, 3:37 PM IST

ಮಂಡ್ಯ: ಕೆ.‌ಆರ್‌.ಎಸ್ ಅಣೆಕಟ್ಟೆ ಸುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ಸಿಎಂ ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಮಾಜಿಕ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಸಿಎಂ ಯಡಿಯೂರಪ್ಪ ಕೆಆರ್‌ಎಸ್‌ನಲ್ಲಿ ಕಾವೇರಿಗೆ ಬಾಗಿನ ಅರ್ಪಣೆ ಮಾಡುವ ವಿಚಾರ ತಿಳಿದ ಹೋರಾಟಗಾರರಾದ ರವೀಂದ್ರ, ಗುರುಪ್ರಸಾದ್ ಕೆರಗೋಡು, ಮಂಚೇಗೌಡ, ಕೆಂಪೂಗೌಡ, ಮಂಜೇಗೌಡ ದೊಡ್ಡಪಾಳ್ಯ ಸೇರಿದಂತೆ ಹಲವರು ಸಿಎಂ ಬಿಎಸ್​​ವೈಗೆ ಕಪ್ಪು ಬಾವುಟ ತೋರಿಸಲು ನಿರ್ಧರಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನೂ ಅವರ ಮನೆ ಬಳಿಯೇ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.