ಮಂಡ್ಯ: ನಾಗಮಂಗಲದ ಸರ್ಕಾರಿ ಕಚೇರಿಗಳಲ್ಲಿ ದಂಧೆ ನಡೆಯುತ್ತಿದೆ. ಇದನ್ನ ಶಾಸಕರೇ ತಡೆಹಿಡಿಯಬೇಕು ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ನಾಗಮಂಗಲದಲ್ಲಿ ಶಾಸಕರ ವೈಫಲ್ಯದ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ನಾಗಮಂಗಲದಲ್ಲಿ ಮಾತನಾಡಿದ ಅವರು, ಇದನ್ನ ಸ್ಪಷ್ಟವಾಗಿ ಹೇಳುತ್ತೇನೆ, ಸರ್ಕಾರಿ ಕಚೇರಿಯಲ್ಲಿ ದಂಧೆ ನಡೆಯುತ್ತಿದೆ. ನಾಗಮಂಗಲದಲ್ಲಿ ಟ್ರಾನ್ಸ್ಫಾರ್ಮ್ ಪೆಟ್ಟಿಗೆ ಹಾಕಿಸಿಕೊಳ್ಳಲು 25 ರಿಂದ 30 ಸಾವಿರ ಫಿಕ್ಸ್ ರೇಟ್ ಮಾಡಿದ್ದಾರೆ. ಯಾರು ಇದಕ್ಕೆ ಕಾರಣ.? ಅಧಿಕಾರಿಗಳ ಹತೋಟಿಯಲ್ಲಿಟ್ಟಿಕೊಳ್ಳಬೇಕಾದುದ್ದು ಯಾರು.?? ಎಂದು ಪ್ರಶ್ನೆ ಮಾಡಿದರು.
ನಾವು ಯಾವ ಅಧಿಕಾರಿಗಳು ಬಂದ್ರು ಜಾಡಿಸುತ್ತೇವೆ. ನಮ್ಮ ಪಾರ್ಟಿಯಲ್ಲಿರುವುದನ್ನೇ ನಾನು ಹೇಳ್ತಿದ್ದೇನೆ. ಶಾಸಕರು ಇಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಮಾಡಬೇಕು. ಅಧಿಕಾರಿಗಳನ್ನ ಕಂಟ್ರೋಲ್ಗೆ ತೆಗೆದುಕೊಳ್ಳಬೇಕು ಎಂದರು.
ತಾಲೂಕು ಕಚೇರಿ, ಕೆಇಬಿ, ರೆವಿನ್ಯೂ, ಇಒ ಕಚೇರಿಯಲ್ಲಿ ದಂಧೆಯಾಗುತ್ತಿದೆ. ಪಿಡಿಒಗಳು ಯಾರ ಮಾತನ್ನು ಕೇಳುತ್ತಿಲ್ಲ. ಹೀಗಾಗಿ ಶಾಸಕರು ಮೀಟಿಂಗ್ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಗಮಂಗಲ ಕ್ಷೇತ್ರಕ್ಕೆ ಮುಂದಿನ ಶಾಸಕ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ನಾನು ನೆಕ್ಸ್ಟ್ ರಂಗ ಕುಣಿತಕ್ಕೆ ರೆಡಿಯಾಗಿದ್ದೇನೆ. ಗ್ರಾಪಂ ಚುನಾವಣೆ ಮುಗಿಯಿತು, ತಾಪಂ ಹಾಗೂ ಜಿಪಂ ಚುನಾವಣೆ ಬರ್ತಿದೆ. ನಾನು ಸಂಸದನಾಗಿ 5 ತಿಂಗಳು ಇದ್ದೆ. ಆದ್ರೆ ಸುರೇಶ್ ಗೌಡ್ರು ಶಾಸಕರಾಗಿದ್ದಾರೆ, ನೆಕ್ಸ್ಟ್ ಸುರೇಶ್ ಗೌಡ್ರು ಎಲ್ಲಿಗೆ ಬೇಕಾದರೂ ಹೊಗಬಹುದು ಎಂದರು.
ನನಗೆ ಟಿಕೆಟ್ ತಪ್ಪಿಸಿದ್ರು, ಸುರೇಶ್ ಗೌಡರಿಗೆ ಕೊಟ್ಟರು. ನಾನು ಆಗಲೇ ಸ್ವತಂತ್ರವಾಗಿ ನಿಲ್ಲಲು ರೇಡಿ ಇದ್ದೆ. ನಮ್ಮ ದೊಡ್ಡ ನಾಯಕರು ಕರೆದು ಈ ಬಾರಿ ಸುರೇಶ್ ಗೌಡರಿಗೆ ಕೊಟ್ಟಿದ್ದೇವೆ ನೀವು ಲೋಕಸಭೆಗೆ ಹೋಗಿ ಅಂತ ಹೇಳಿ ಟಿಕೆಟ್ ಕೊಟ್ಟಿರಲಿಲ್ಲ. ನನಗೆ ಮೋಸ ಮಾಡಿದ್ರು, ನನ್ನ ಹಣೆಬರಹ ಅಧಿಕಾರ ಸರಿಯಾಗಿ ಬರಲಿಲ್ಲ ಅಂತಾ ನೋವು ಇದೆ. ಈ ಸಾರಿ ಏನಾದ್ರೂ ಮಾಡಿ ವಿಧಾನಸೌದಕ್ಕೆ ಹೋಗಬೇಕು ಅಂತಾ ತೀರ್ಮಾನಿಸಿದ್ದೇನೆ ಎಂದರು.
ಒಂದು ನಮ್ಮ ನಾಯಕರು ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡಬೇಕು. ಜನ ತೀರ್ಮಾನ ತೆಗೆದುಕೊಳ್ಳಬೇಕಲ್ಲ. ನಾವು ಪಾರ್ಟಿ ವಿರುದ್ಧ ಹೇಳಿಕೆ ಕೊಡ್ತಿಲ್ಲಾ. ನಮ್ಮ ಪಾರ್ಟಿಗಾಗಿ ಹಗಲಿರುಳು ಒದ್ದಾಡುತ್ತಿದ್ದೇವೆ. ಜೆಡಿಎಸ್ ಕಟ್ಟುವ ಕೆಲಸ ಮಾಡ್ತಿದ್ದೇವೆ ಎಂದರು.
ಇದನ್ನೂ ಓದಿ: ನಮ್ಮದು ಹಿಟ್ಲರ್ ಆಡಳಿತವಲ್ಲ.. ಕುಮಾರಸ್ವಾಮಿ ರಾಜಕೀಯವಾಗಿ ಮಾತಾಡ್ತಾರೆ.. ಸಚಿವ ಶ್ರೀರಾಮುಲು