ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಬೆನ್ನಲ್ಲೇ ಪುತ್ಥಳಿ ಪಾಲಿಟಿಕ್ಸ್ ರಂಗೇರಿದೆ. ಪುತ್ಥಳಿ ನಿರ್ಮಾಣದ ಮೂಲಕ ಲಿಂಗಾಯತ ಮತ ಬೇಟೆಗೆ ಬಿಜೆಪಿ - ಜೆಡಿಎಸ್ ಮುಂದಾಗಿದೆ. ಶಿವಕುಮಾರ್ ಸ್ವಾಮೀಜಿ ಹಾಗೂ ಬಸವೇಶ್ವರ ಪುತ್ಥಳಿ ಮೂಲಕ ಲಿಂಗಾಯತ ಮತಗಳಿಗೆ ಕೈ ಹಾಕಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ.
ಹೌದು, ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿತ್ತು. ಇದೀಗಾ ಸಮುದಾಯದ ಮತಭೇಟಿಗಾಗಿ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಮಂಡ್ಯ ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದ ಬಿಜೆಪಿ ಪಕ್ಷದಿಂದ ಡಾ ಶಿವಕುಮಾರ್ ಸ್ವಾಮಿ ಪುತ್ಥಳಿ ನಿರ್ಮಾಣ ಮಾಡಲಾಗಿತ್ತು. ಇದೀಗ ಜೆಡಿಎಸ್ ಪಕ್ಷದಿಂದ ಗ್ರಾಮದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಬಸವೇಶ್ವರರ ಪುತ್ಥಳಿ ಕೊಡಿಸಿ ಶಾಸಕ ಪುಟ್ಟರಾಜು ಲಿಂಗಾಯಿತ ಮತ ಬೇಟೆಗೆ ಇಳಿದಿದ್ದಾರೆ.
ಅಂದು ಗ್ರಾಮದಲ್ಲಿ ಶಿವಕುಮಾರಸ್ವಾಮಿ ಪ್ರತಿಮೆಯನ್ನು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅನಾವರಣ ಮಾಡಿದ್ರು. ಬಿಜೆಪಿ ಮುಖಂಡ ಡಾ. ಇಂದ್ರೇಶ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕರೆಸಿ ಸ್ಥಳೀಯ ಜೆಡಿಎಸ್ ಮುಖಂಡರು ಬಸವೇಶ್ವರರ ಪುತ್ಥಳಿ ಅನಾವರಣ ಮಾಡಿಸಿದ್ರು. ಹೆಲಿಕಾಪ್ಟರ್ನಲ್ಲಿ ಕುಮಾರಸ್ವಾಮಿ ಅವರು ಗ್ರಾಮಕ್ಕೆ ಆಗಮಿಸಿದ್ದರು. ತಮ್ಮ ಗ್ರಾಮಕ್ಕೆ ಆಗಮಿಸಿದ ಹೆಚ್ ಡಿಕೆ ಅವರಿಗೆ ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಜನರು ಸ್ವಾಗತಿಸಿದರು. ಬಳಿಕ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಾಣೆ ಮಾಡಿ ಉದ್ಘಾಟಿಸಲಾಯಿತು.
ಇದನ್ನೂ ಓದಿ : ರಾಹುಲ್ ಗಾಂಧಿ ‘ಬಂದಾ ಪುಟ್ಟ ಹೋದ ಪುಟ್ಟ’ ಕನ್ನಡಿಗರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ
ವೇದಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿ ಬಸವೇಶ್ವರ ಪುತ್ಥಳಿ ಉದ್ಘಾಟನೆ ನೆರವೇರಿಸಿದರು. ದೀಪ ಬೆಳಗುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಶಿವಕುಮಾರ್ ಸ್ವಾಮೀಜಿ ಪುತ್ಥಳಿ ಅನಾವರಣವಾಗಿದೆ. ಎಲ್ಲಾ ಕುಟುಂಬಗಳು ಸಮಾನತೆ ಕಾಣಬೇಕು. ಸಮಾಜದಲ್ಲಿ ತಾರತಮ್ಯ ಕಾಣುತ್ತಿದ್ದೇವೆ. ಸ್ವಾತಂತ್ರ್ಯ ಬಂದರೂ ರೈತರಿಗೆ ಅನುಕೂಲ ಇಲ್ಲ, ಯುವಕರಿಗೆ ಉದ್ಯೋಗ ಇಲ್ಲ. ಕಳೆದ ಮೂರುವರೆ ತಿಂಗಳಿಂದ ಪಂಚರತ್ನಯಾತ್ರೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಬಣ ಸೃಷ್ಟಿ; ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು
ಬಡತನ ಎದ್ದು ಕಾಣುತ್ತಿದೆ: ಪ್ರತಿಯೊಂದು ಕುಟುಂಬದಲ್ಲಿ ಸಮಾನತೆ ತರಲು ಪಂಚರತ್ನ ಯೋಜನೆ ತರಲು ಹೊರಟಿದ್ದೇನೆ. ನಾಡಿನ ಜನತೆಯ ಆಶೀರ್ವಾದ ಪಡೆಯುತ್ತಿದ್ದೇನೆ. ಈ ಭಾಗದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿಗೆ ಹೆಸರುವಾಸಿಯಾಗಿರುವುದು ಪುಟ್ಟರಾಜು. ಒಳ್ಳೆಯ ಜನ ಸೇವಕನನ್ನು ಪಡೆದಿದ್ದೀರಿ. ಮುಂದೆಯೂ ಸಹ ಪುಟ್ಟರಾಜುಗೆ ಆಶೀರ್ವಾದ ಮಾಡಿ. ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಕೊಡಿ ಎನ್ನುವ ಮೂಲಕ ಶಾಸಕ ಪುಟ್ಟರಾಜ ಅವರನ್ನ ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ರು.
ಒಟ್ಟಾರೆ ಒಂದೇ ಗ್ರಾಮದಲ್ಲಿ ಎರಡು ಪುತ್ಥಳಿ ನಿರ್ಮಾಣದ ಮೂಲಕ ಲಿಂಗಾಯತ ಮತಕ್ಕೆ ಜೆಡಿಎಸ್-ಬಿಜೆಪಿ ನಾಯಕರು ಕೈ ಹಾಕಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಚುನಾವಣೆ ಹೊಸ್ತಿಲಲ್ಲಿ ಸಾಲು ಸಾಲು ಪ್ರತಿಮೆಗಳ ಅನಾವರಣ.. ವಿವಿಧ ಸಮುದಾಯದ ಮತಬೇಟೆಗೆ ಬಿಜೆಪಿ ತಂತ್ರ