ETV Bharat / state

ಸಾಮೂಹಿಕ ಆತ್ಮಹತ್ಯೆಗೆ ಅವರೇ ಕಾರಣ, ನಮ್ಮಣ್ಣನಲ್ಲ: ಶಂಕರ್ ಸಹೋದರಿ - bengalure crime

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಮೇಲಿರುವ ಆರೋಪಗಳನ್ನು ಅವರ ಸಹೋದರಿ ಪಾರ್ವತಿ ತಳ್ಳಿಹಾಕಿದ್ದಾರೆ.

parvati
ಪಾರ್ವತಿ
author img

By

Published : Sep 20, 2021, 2:30 PM IST

Updated : Sep 20, 2021, 4:18 PM IST

ಮಂಡ್ಯ: ಅವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಅಲ್ಲವೆಂದು ಬೆಂಗಳೂರಲ್ಲಿ ನಡೆದ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಹಲ್ಲೆಗೆರೆ ಸಹೋದರಿ ಹೇಳಿಕೆ ನೀಡುವ ಮೂಲಕ ಸಹೋದರನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಮಂಡ್ಯದ ಹಲ್ಲೆಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಂಕರ್ ಸಹೋದರಿ ಪಾರ್ವತಿ, ಮಧುಸಾಗರ್ ಸಾಯುವ ಮುನ್ನ ಶಂಕರ್ ವಿರುದ್ಧ ಡೆತ್ ನೋಟ್​ನಲ್ಲಿ ತಂದೆಯ ವಿರುದ್ಧ ಮಾಡಿರುವ ಗಂಭೀರ ಆರೋಪಗಳೆಲ್ಲಾ ಸುಳ್ಳು. ಅವರ ಸಾವಿಗೆ ನಮ್ಮಣ್ಣ ಕಾರಣವಲ್ಲ. ಅವರೇ ಅವರ ಸಾವಿಗೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಒಂದೇ‌ ಕುಟುಂಬದ ಐವರ ಸಾಮೂಹಿಕ‌ ಆತ್ಮಹತ್ಯೆ ಪ್ರಕರಣ: ವಿಚಾರಣೆಗೆ ಹಾಜರಾದ ಶಂಕರ್

ಅವರ ತಪ್ಪು ಇಟ್ಟುಕೊಂಡು ಇನ್ನೊಬ್ಬರನ್ನ ದೂರುತ್ತಾರಲ್ಲ ಅದು ತಪ್ಪು. ನಮ್ಮಣ್ಣ ಆ ರೀತಿಯ ವ್ಯಕ್ತಿಯಲ್ಲ, ಬೇಕಿದ್ದರೆ ಅಕ್ಕಪಕ್ಕದ ಊರಿನವರನ್ನ ಕೇಳಿ. ನಮ್ಮ ಅತ್ತಿಗೆ ಮದುವೆಯಾದಾಗಿನಿಂದಲೂ ನಮ್ಮಣ್ಣನಿಗೆ ಟಾರ್ಚರ್ ಕೊಡುತ್ತಿದ್ದರು. ನಮ್ಮಣ್ಣ ನೆಮ್ಮದಿಯಿಂದರಲಿ ಎಂದು ನಾವ್ಯಾರು ಅವರ ಮನೆಗೆ ಹೋಗುತ್ತಿರಲಿಲ್ಲ ಎಂದು ಪಾರ್ವತಿ ಕಣ್ಣೀರಿಟ್ಟಿದ್ದಾರೆ.

ಅಣ್ಣನ ವಿರುದ್ಧದ ಆರೋಪ ತಳ್ಳಿಹಾಕಿದ ಸಹೋದರಿ

ಇದನ್ನು ಓದಿ: 'ತಂದೆಯ ಮನೆಯಲ್ಲಿ ನೋಡಿಕೊಳ್ಳಲಿಲ್ಲ; ಗಂಡನ ಮನೆಯಲ್ಲಿ ನೆಮ್ಮದಿಯಿಲ್ಲ': ನಾಲ್ವರ ಆತ್ಮಹತ್ಯೆ ಪ್ರಕರಣದ ಡೆತ್‌ನೋಟ್‌

ಮದುವೆಯಾದಾಗಿನಿಂದಲೂ ಕೂಡ ನಮ್ಮಣ್ಣನ ಹೆಂಡತಿ ಹಠವಾದಿ. ನಮ್ಮ ಜೊತೆಗೆ ನಮ್ಮಣ್ಣನ ಹೆಂಡತಿ, ಮಕ್ಕಳು ಮಾತಾಡುತ್ತಿರಲಿಲ್ಲ. ನಮ್ಮಣ್ಣ ಅವರ ಕಷ್ಟವನ್ನ ಯಾವತ್ತು ನಮ್ಮ ಹತ್ತಿರ ಹೇಳಿಕೊಳ್ಳುತ್ತಿರಲಿಲ್ಲ. ನಮ್ಮ ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಮ್ಮಣ್ಣ ಅಂತಹವರಲ್ಲ ಎಂದು ಹೇಳಿದರು.

ಇದನ್ನು ಓದಿ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಇಂದು ಪೊಲೀಸರಿಂದ ಸ್ಥಳ ಮಹಜರು

Last Updated : Sep 20, 2021, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.