ETV Bharat / state

ಲಕ್ಷಾಂತರ ಮೌಲ್ಯದ ಸಾಗವಾನಿ ಮರ ಕಳ್ಳತನ ಯತ್ನ.. ವಾಹನ ಪಲ್ಟಿಯಾಗಿ ಸಿಕ್ಕಿಬಿದ್ದ ಕಳ್ಳರು - mandya_forest

ಹಲವು ದಿನಗಳಿಂದ ಈ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮರಗಳು ಕಳ್ಳತನವಾಗುತ್ತಿದ್ದವು. ಕಳ್ಳರ ಜಾಡಿಗೆ ಬಲೆ ಬೀಸಿದ್ದ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

ವಾಹನ ಪಲ್ಟಿಯಾಗಿ ಸಿಕ್ಕಿಬಿದ್ದ ಕಳ್ಳರು
author img

By

Published : Jul 26, 2019, 2:42 PM IST

ಮಂಡ್ಯ: ಕಳೆದ ರಾತ್ರಿ ಮರಗಳ್ಳರು ಲಕ್ಷಾಂತರ ರೂ. ಬೆಲೆಬಾಳುವ ಸಾಗವಾನಿ ಮರಗಳನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಕತ್ತರಿಸಿ ಕಳುವು ಮಾಡುತ್ತಿದ್ದರು. ಆದರೆ, ಮಾಲು ತುಂಬಿದ್ದ ಬೊಲೆರೋ ಪಲ್ಟಿಯಾಗಿ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಇಂಡುವಾಳು ಪ್ರಕೃತಿ ಉದ್ಯಾನದಲ್ಲಿ ನಡೆದಿದೆ.

ಸುಮಾರು 400 ಎಕರೆ ಪ್ರಕೃತಿ ಪಾರ್ಕ್‌ನಲ್ಲಿ 2 ಲಕ್ಷ ರೂ. ಮೌಲ್ಯದ ಸಾಗವಾನಿ ಮರಗಳನ್ನು ಕತ್ತರಿಸಿ ಕರೆದ್ದೊಯ್ಯತ್ತಿದ್ದರು. ಹುಣಸೂರು ಆರ್‌ಟಿಒ ನೋಂದಣಿಯ ಕಾರಿನಲ್ಲಿ ಕಳ್ಳರು ಮಾಲು ಸಾಗಿಸುತ್ತಿದ್ದಾಗ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಕೆಲವರು ಪರಾರಿಯಾಗಿದ್ದು, ಚಾಲಕನನ್ನು ಬಂಧಿಸಿದ್ದಾರೆ.

ವಾಹನ ಪಲ್ಟಿಯಾಗಿ ಸಿಕ್ಕಿಬಿದ್ದ ಕಳ್ಳರು

ಹಲವು ದಿನಗಳಿಂದ ಈ ಅರಣ್ಯಪ್ರದೇಶದಲ್ಲಿ ಸಾಗವಾನಿ ಮರಗಳು ಕಳ್ಳತನವಾಗುತ್ತಿದ್ದವು. ಕಳ್ಳರ ಜಾಡಿಗೆ ಬಲೆ ಬೀಸಿದ್ದ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ. ಆದರೆ ಈ ಕಳ್ಳತನದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಪರಿಸರ ಪ್ರೇಮಿಗಳ ವಾದವಾಗಿದೆ.

Intro:ಮಂಡ್ಯ: ಕಳೆದ ರಾತ್ರಿ ಮರಗಳ್ಳರು ಲಕ್ಷಾಂತರ ರೂಪಾಯಿಯ ಸಾಗುವನಿ ಮರವನ್ನು ಮೀಸಲು ಅರಣ್ಯದಲ್ಲಿ ಕತ್ತರಿಸಿ ಕಳವು ಮಾಡಿಕೊಂಡು ಹೋಗುತ್ತಿದ್ದರು. ಕಳವು ಮಾಲು ತುಂಬಿದ್ದ ಬೊಲೆರೋ ಪಲ್ಟಿಯಾಗಿ ಈಗ ಅಧಿಕಾರಿಗಳ ಅತಿಥಿಯಾದ ಘಟನೆ ಮಂಡ್ಯಕ್ಕೆ ಸಮೀಪವೇ ಇರುವ ಇಂಡುವಾಳು ಪ್ರಕೃತಿ ಉದ್ಯಾನವನದಲ್ಲಿ ನಡೆದಿದೆ.

Body:ಸುಮಾರು 400 ಎಕರೆಯ ಪ್ರಕೃತಿ ಪಾರ್ಕ್‌ನಲ್ಲಿ ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಸಾಗುವನಿ ಮರವನ್ನು ಕತ್ತರಿಸಿ ಕಳ್ಳರು ತೆಗೆದುಕೊಂಡು ಹೋಗುತ್ತಿದ್ದರು. ಹುಣಸೂರು ಆರ್‌ಟಿಓ ನೋಂದಣಿಯ ಕಾರಿನಲ್ಲಿ ಕಳ್ಳರು ಸಾಗಿಸುತ್ತಿದ್ದಾಗ ಕಾರು ಅಪಘಾತಗೊಂಡಿದೆ. ಈ ಸಂದರ್ಭದಲ್ಲಿ ಕಾರು ಅಪಘಾತಗೊಂಡು ಚಾಲಕ ಗಾಯಗೊಂಡಿದ್ದಾನೆ. ಕಾರ್ಯಚರಣೆಗೆ ಅಧಿಕಾರಿಗಳು ಇಳಿಯುತ್ತಿದ್ದಂತೆ ಕೆಲವರು ಓಡಿ ಹೋದರೆ, ಚಾಲಕ ಅಧಿಕಾರಿಗಳಿಗೆ ಸಿಲುಕಿಕೊಂಡಿದ್ದಾನೆ.
ಗಾಯಾಳುವನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಸದರಿ ಅರಣ್ಯ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿಯ ಸಾಗುವನಿ ಮರಗಳಿದ್ದು, ಒಂದೊಂದೋ ಕಳವು ಆಗುತ್ತಿದ್ದವು. ಎಚ್ಚರಿಕೆ ವಹಿಸಿದ್ದ ಅಧಿಕಾರಿಗಳು ಕೊನೆಗೂ ಕಳ್ಳರನ್ನು ಹಿಡಿದಿದ್ದಾರೆ. ಆದರೆ ಪರಿಸರ ಪ್ರೇಮಿಗಳು ಹೇಳುವುದು ಬೇರೆ. ಮರ ಕಳ್ಳತನ ಪ್ರಕರಣದಲ್ಲಿ ಅಧಿಕಾರಿಗಳು ಸಾಮೀಲಾಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೈಟ್: ರವೀಂದ್ರ, ಹೋರಾಟಗಾರ.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.