ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಚ್ಚು, ಲಾಂಗು ಹಿಡಿದು ದರೋಡೆಗೆ ಸಂಚು ರೂಪಿಸಿದ ಹತ್ತು ಜನ ಆರೋಪಿಗಳನ್ನು ಬಂಧಿಸುವಲ್ಲಿ ಕೆಆರ್‌ಎಸ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬಳಿ ಇರುವ ಇಲವಾಲ ರಸ್ತೆಯ ಡಿಪಾಲ್ ಶಾಲೆ ಸಮೀಪ ಮಚ್ಚು, ಲಾಂಗು ಸಮೇತ ದರೋಡೆಗೆ ಸಂಚು ಹಾಕಿದ್ದ ಆರೋಪಿಗಳನ್ನು ಎಸ್ಐ ನವೀನ್‌ಗೌಡ ತಂಡ ಬಂಧಿಸಿದೆ.
ದರೋಡೆಗೆ ಹೊಂಚು ಹಾಕಿದ್ದವರು ಅಂದರ್ ದರೋಡೆಗೆ ಹೊಂಚು ಹಾಕಿದ್ದವರು ಅಂದರ್ ದರೋಡೆಗೆ ಹೊಂಚು ಹಾಕಿದ್ದವರು ಅಂದರ್ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆಯ ಯಶವಂತ್, ಕಿಶೋರ್, ಆಕಾಶ್, ಸಚಿನ್, ಶಿವು, ಚಲುವರಾಜು, ನಂದೀಶ್‌ಗೌಡ, ಕೆಆರ್‌ಎಸ್‌ನ ಶಶಾಂಕ್, ಹೊಂಗಹಳ್ಳಿಯ ನಿಶ್ಚಿತ್, ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಎಪಿ ಪ್ರಥಮ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ವಿಚಾರಣೆ ವೇಳೆ ದರೋಡೆಗೆ ಸಂಚು ರೂಪಿಸುತ್ತಿದ್ದ ಸಂಗತಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಐ ನವೀನ್ ಗೌಡ ಮಾಹಿತಿ ನೀಡಿದ್ದು, ಬಂಧಿತರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.