ETV Bharat / state

ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ, ನನಗೆ ಯಾವುದೇ ಭಯವಿಲ್ಲ: ಸಂಸದೆ ಸುಮಲತಾ ಅಂಬರೀಶ್​

ಮಂಡ್ಯದಲ್ಲಿ ಸೇಡಿ ರಾಜಕಾರಣ ಹೊಸತೇನಲ್ಲ - ಕಾರ್ಯಕ್ರಮದ ವೇದಿಕೆ ಹತ್ತುವ ವಿಚಾರವಾಗಿ ಗಲಾಟೆ - ಸಂಸದೆ ಸುಮಲತಾ ಅಂಬರೀಶ್​​ ಪ್ರತಿಕ್ರಿಯೆ

revenge-politics-is-not-new-in-mandya-says-mp-sumalatha-ambareesh
ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ.ನನಗೆ ಯಾವುದೇ ಭಯವಿಲ್ಲ : ಸಂಸದೆ ಸುಮಲತ
author img

By

Published : Jan 23, 2023, 5:14 PM IST

Updated : Jan 23, 2023, 5:28 PM IST

ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ, ನನಗೆ ಯಾವುದೇ ಭಯವಿಲ್ಲ: ಸಂಸದೆ ಸುಮಲತಾ ಅಂಬರೀಶ್​

ಮಂಡ್ಯ : ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ. ಸೇಡಿನ ರಾಜಕಾರಣವನ್ನು ನಾನು ಎದುರಿಸುತ್ತೇನೆ. ನನಗೆ ಯಾವುದೇ ಭಯವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಲು ನಡೆದ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ’’ಈ ರೀತಿ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಈ ರೀತಿಯ ಗೊಂದಲಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಯಾರ್ಯಾರು ಪ್ಲೆಕ್ಸ್ ಹಾಕಿದ್ದಾರೆ ಎಂಬ ಬಗ್ಗೆ ನಾನು ಯೋಚನೆ ಮಾಡಲ್ಲ. ಅಷ್ಟು ತಳಮಟ್ಟಕ್ಕೆ ನಾನು ಇದುವರೆಗೂ ಹೋಗಿಲ್ಲ. ಅಂತಹ ರಾಜಕಾರಣವನ್ನೂ ನಾನು ಮಾಡಲ್ಲ. ಚುನಾವಣೆ ಹತ್ತಿರ ಬಂದಿರುವುದರಿಂದ ಈ ರೀತಿಯ ಗೊಂದಲಗಳನ್ನು ಮಾಡಲಾಗುತ್ತಿದೆ. ಅಲ್ಲಿ ಗಲಾಟೆ ಯಾರು ಮಾಡಿದರು ಎಂಬುದು ನನಗೆ ಗೊತ್ತಿಲ್ಲ, ಅದನ್ನು ಕೇಳುವುದಕ್ಕೂ ಹೋಗುವುದಿಲ್ಲ‘‘ ಎಂದು ಹೇಳಿದರು.

ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ : ಮಂಡ್ಯದಲ್ಲಿ ಸೇಡಿನ ರಾಜಕಾರಣ ಹೊಸದೇನಲ್ಲ. ಲೋಕಸಭಾ ಚುನಾವಣೆಯಿಂದ ಆರಂಭವಾದ ಈ ರಾಜಕಾರಣ ಇಲ್ಲಿಯವರೆಗೂ ಬಂದು ನಿಂತಿದೆ. ಅದು ಇವತ್ತಿನವರೆಗೆ ನಡೆದುಕೊಂಡೇ ಹೋಗುತ್ತಿದೆ. ಇಂತಹ ರಾಜಕಾರಣವನ್ನು ನಾನು ಧೈರ್ಯವಾಗಿಯೇ ಎದುರಿಸುತ್ತೇನೆ. ನನಗೆ ಈ ಬಗ್ಗೆ ಭಯವೇನೂ ಇಲ್ಲ. ಇನ್ನು ಸೇಡಿನ ರಾಜಕಾರಣ ಎಷ್ಟು ದಿನ ನಡೆಯುತ್ತದೆ. ಜನರು ಎಷ್ಟು ದಿನ ಸಹಿಸಿಕೊಳ್ಳುತ್ತಾರೆ.? ಅಭಿವೃದ್ದಿ ಕಾರ್ಯಗಳನ್ನು ತಡೆಯಲು ಮಾಡುತ್ತಿರುವ ಕೆಲಸಗಳಿವು. ಬೋರ್ಡ್ ನೋಡಿ, ಫ್ಲೆಕ್ಸ್​ ನೋಡಿ ಎಂದು ಹೇಳುತ್ತಾರೆ. ಅದನ್ನು ಬಿಟ್ಟು ರೋಡ್ ನೋಡಿ ಅಂದಿದ್ದರೆ ನನಗೆ ಖುಷಿ ಆಗುತ್ತಿತ್ತು ಎಂದು ಕಾರ್ಯಕ್ರಮದ ವೇಳೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಸಂಸದೆ ಸುಮಲತಾ ಈ ಮಾತುಗಳನ್ನು ಆಡಿದರು.

ರಾಜಕಾರಣದಲ್ಲಿ ಬದಲಾವಣೆ ಬರಬೇಕು : ನಮ್ಮ ಜಿಲ್ಲೆಯ ರಾಜಕಾರಣದಲ್ಲಿ ಬದಲಾವಣೆ ಬರಲೇಬೇಕು. ಹೋದಲೆಲ್ಲ ಜೆಡಿಎಸ್ ನವರೇ ಗಲಾಟೆ ಮಾಡುತ್ತಿದ್ದಾರೆ. ಅವರಿಗೆ ಕಳೆದ ಲೋಕಸಭಾ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನ ಒಮ್ಮೆ ಪಾಠ ಕಲಿಸಿದ ಮೇಲೆ ಕಲಿತುಕೊಳ್ಳಬೇಕಿತ್ತು. ಆದರೂ ಈ ಬಗ್ಗೆ ಪಾಠ ಕಲಿಯದೇ ಮತ್ತೂ ಅದನ್ನೆ ಮಾಡಿಕೊಂಡು ಹೋದರೆ ಜನ ಒಪ್ಪಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಅಷ್ಟು ತಿಳಿವಳಿಕೆ ಇಲ್ಲ ಎಂದರೇ ದೇವರೇ ಗತಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥರಲ್ಲಿ ಸ್ಥಳೀಯವಾಗಿ ಏನು ಗೊಂದಲಗಳಿವೆಯೋ ಗೊತ್ತಿಲ್ಲ. ಯಾವು ಸಮಸ್ಯೆಗಳಿವೆ ಎಂಬುದನ್ನು ಅವರೇ ಗುರುತಿಸಿ ಬಗೆಹರಿಸಿಕೊಳ್ಳಬೇಕು‌. ಯಾವ ಅಭಿವೃದ್ದಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂಬುದನ್ನು ಅವರೆಲ್ಲರೂ ಸೇರಿ ಯೋಚನೆ ಮಾಡಬೇಕು‌. ಈ ಸಣ್ಣ ಪುಟ್ಟ ಗೊಂದಲಗಳಿಗೆ ನನ್ನನ್ನು ಎಳೆಯಲು ಹೋದರೆ, ಆ ಆಟದಲ್ಲಿ ನಾನಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್​ ಇದೇ ವೇಳೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸದೆ ವೇದಿಕೆ ಹತ್ತುವ ವಿಚಾರಕ್ಕೆ ಗಲಾಟೆ : ಸಂಸದೆ ಸುಮಲತಾ ಅಂಬರೀಶ್ ಅವರು ಕಾರ್ಯಕ್ರಮದ ವೇದಿಕೆ ಹತ್ತುವ ವಿಚಾರಕ್ಕೆ ಎರಡು ಬಣಗಳು ವಾಗ್ವಾದ ನಡೆಸಿ, ಕೈ ಕೈ ಮಿಲಾಯಿಸಿರುವ ಘಟನೆ ಬಿ.ಗೌಡಗೆರೆ ಗ್ರಾಮದ ಮಹದೇಶ್ವರ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದಿತ್ತು. ಇಲ್ಲಿನ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರನ್ನು ವೇದಿಕೆಗೆ ಹತ್ತಿಸಬಾರದೆಂದು ಗ್ರಾಮಸ್ಥರು ಮೊದಲು ತೀರ್ಮಾನ ಮಾಡಿದ್ದರು. ಆದರೆ ಕಾರ್ಯಕ್ರಮದ ವೇದಿಕೆಗೆ ಸಂಸದೆ ಸುಮಲತಾರನ್ನು ಕರೆತಂದಿದ್ದಕ್ಕೆ ವಾಗ್ವಾದ ಶುರುವಾಗಿತ್ತು.

ಇದನ್ನೂ ಓದಿ : Watch.. ಸಂಸದೆ ಸುಮಲತಾ ಅಂಬರೀಶ್ ವೇದಿಕೆ ಹತ್ತುವ ವಿಚಾರ: ಎರಡು ಗುಂಪುಗಳ ನಡುವೆ ವಾಗ್ವಾದ

Last Updated : Jan 23, 2023, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.