ETV Bharat / state

ಮದುವೆ ಮನೆಯಲ್ಲಿ ಚುನಾವಣಾ ಫಲಿತಾಂಶ ಲೈವ್​... ವಧುವರರ ಬದಲು ಟಿವಿ ನೋಡ್ತಿದ್ದ ಮಂಡ್ಯ ಜನ - undefined

ಮಂಡ್ಯದ  ಶಶಿ ಕಿರಣ ಹಾಗೂ ಬಿಜಿಎಸ್ ಸಮುದಾಯ ಭವನದಲ್ಲಿ ನಡೆಯತ್ತಿರುವ ಮದುವೆಮನೆಯಲ್ಲಿ ಅಳವಡಿಸಿರುವ ಎಲ್​ಇಡಿಯಲ್ಲಿ ಚುನಾವಣಾ ಫಲಿತಾಂಶ ಪ್ರಕಟಿಸಲಾಗುತ್ತಿದೆ.

ಮದುವೆ ಮನೆ ಎಲ್​ಇಡಿಯಲ್ಲಿ ಚುನಾವಣಾ ಫಲಿತಾಂಶ
author img

By

Published : May 23, 2019, 1:12 PM IST

ಮಂಡ್ಯ: ಮದುವೆ ಮನೆಯಲ್ಲಿ ಎಲ್​ಇಡಿ ಫಿಕ್ಸ್​ ಮಾಡಿ ಮಧುಮಗ ಮಧುಮಗಳ ವಿಡಿಯೋ, ಫೋಟೋಗಳನ್ನು ಅನಾವರಣಗೊಳಿಸುವುದು ಸಾಮಾನ್ಯ. ಆದ್ರೆ ಚುನಾವಣೆ ಹಿನ್ನಲೆ ಇಲ್ಲೊಂದು ಮದುವೆ ಮನೆಯಲ್ಲಿ ಬೇರೆಯೇ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಮದುವೆ ಮನೆ ಎಲ್​ಇಡಿಯಲ್ಲಿ ಚುನಾವಣಾ ಫಲಿತಾಂಶ

ಹೌದು ಲೋಕಸಭಾ ಚುನಾವಣೆ ರಣಕಣದಲ್ಲಿ ಅತಿಹೆಚ್ಚು ಚರ್ಚೆಗೀಡಾದ ಕ್ಷೇತ್ರ ಮಂಡ್ಯ ವಿಧಾನಸಭಾ ಕ್ಷೇತ್ರ. ಇಲ್ಲಿನ ಶಶಿ ಕಿರಣ ಹಾಗೂ ಬಿಜಿಎಸ್ ಸಮುದಾಯ ಭವನದಲ್ಲಿ ನೆರವೇರುತ್ತಿರುವ ಮದುವೆ ಕಾರ್ಯಕ್ರಮದಲ್ಲಿ ಅಳವಡಿಸಿರುವ ಸ್ಕ್ರೀನ್​ನಲ್ಲಿ ವಧುವರರ ಫೋಟೋ, ವೀಡಿಯೋ ತೋರುವ ಬದಲು ಚುನಾವಣಾ ಫಲಿತಾಂಶ ಪ್ರಕಟಿಸಲಾಗುತ್ತಿದೆ.

ಇದು ಮಂಡ್ಯ ಕ್ಷೇತ್ರದಲ್ಲಿರುವ ನೆಕ್​ ಟು ನೆಕ್​ ಫೈಟ್​ ಅನ್ನು ತಿಳಿಸುತ್ತದೆ. ಹಾಗೂ ಜನರಲ್ಲಿ ತಮ್ಮ ನಾಯಕರನ್ನು ತಿಳಿಯುವ ಕುತೂಹಲವನ್ನು ತೋರಿಸುತ್ತದೆ. ಏನೇ ಆಗಲಿ ಇದು ಫಲಿತಾಂಶದ ಕಾರಣ ಮುಂದಿಟ್ಟುಕೊಂಡು ಅತಿಥಿಗಳು ಮದುವೆಯನ್ನು ತಪ್ಪಿಸದಿರಲಿ ಎಂದು ಮದುವೆ ಮನೆಯವರು ಮಾಡಿರುವ ಉಪಾಯವೇ ಸರಿ.

Intro:ElectionBody:ElectionConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.