ETV Bharat / state

ಸುಮಲತಾ ಗೆಲುವು: ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ ಅಂಬರೀಶ್ ಸೋದರ ಸಂಬಂಧಿ - undefined

ಸುಮಲತಾ ಅಂಬರೀಶ್ ಗೆದ್ದರೆ ಕೇಶಮುಂಡನ ಮಾಡಿಸುವುದಾಗಿ ಹರಕೆ ಹೊತ್ತಿದ್ದ ರೆಬಲ್​ ಸ್ಟಾರ್ ಅಂಬರೀಶ್ ಸೋದರ ಸಂಬಂಧಿಯೊಬ್ಬರು ಇಂದು ಅಂಬಿ ಸಮಾಧಿ ಬಳಿ ಪೂಜೆ ಸಲ್ಲಿಸಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ್ದಾರೆ.

ಕೇಶಮುಂಡನ
author img

By

Published : May 24, 2019, 12:48 PM IST

ಮಂಡ್ಯ ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ ರಾಜ್ಯದಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ ಸುಮಲತಾ.

ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ ಅಂಬರೀಶ್ ಸೋದರ ಸಂಬಂಧಿ

ಇನ್ನು ಸುಮಲತಾ ಗೆಲುವಿಗಾಗಿ ದೇವರಿಗೆ ಹರಕೆ ಹೊತ್ತಿದ್ದವರು ನಿನ್ನೆ ಪೂಜೆ, ಉರುಳುಸೇವೆ ಮಾಡುವ ಮೂಲಕ ಹರಕೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ರೆಬಲ್ ಸ್ಟಾರ್ ಅಂಬರೀಶ್ ಅವರ ಸೋದರ ಸಂಬಂಧಿ ದೊಡ್ಡ ಅರಸಿಕೆರೆಯ ಅಕ್ಷಯ್ ಎಂಬ ಯುವಕ ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದಾಗಲೇ, ಅವರು ಗೆದ್ದರೆ ಕೇಶಮುಂಡನ ಮಾಡಿಸುವುದಾಗಿ ದೇವರಲ್ಲಿ ಹರಕೆ ಹೊತ್ತಿದ್ದರು. ನುಡಿದಂತೆ ನಡೆದ ಅಕ್ಷಯ್ ಇಂದು ಕೇಶಮುಂಡನ ಮಾಡಿಸಿದ್ದಾರೆ.

ಮಂಡ್ಯದಿಂದ ಬೆಂಗಳೂರಿಗೆ ಅಂಬರೀಶ್ ಸಮಾಧಿ ಬಳಿ ಬಂದ ಅಕ್ಷಯ್ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸಮಾಧಿ ಬಳಿಯೇ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಇನ್ನು ಹರಕೆ ವಿಚಾರವನ್ನು ಯಾರಿಗೂ ಹೇಳದ ಅಕ್ಷಯ್ ಮನೆಯವರು ಎಷ್ಟೇ ಬಲವಂತ ಮಾಡಿದರೂ 3-4 ತಿಂಗಳಿಂದ ಕೂದಲನ್ನು ಬಿಟ್ಟಿದ್ದು ಇಂದು ಕೇಶಮುಂಡನ ಮಾಡಿಸಿದ್ದಾರೆ. ಗೆಲುವಿಗೆ ಕಾರಣರಾದ ಮಂಡ್ಯದ ಜನತೆಗೆ ಅಕ್ಷಯ್ ಧನ್ಯವಾದ ತಿಳಿಸಿದ್ದಾರೆ.

Intro:ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವುಗಾಗಿ ಸಾವಿರಾರು ಅಭಿಮಾನಿಗಳು ಹರಕೆ ಹೊತ್ತಿದ್ದರು.ಹಲವರು ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದರು.

Body:ಈಗ ಅದೇ ರೀತಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೋದರ ಸಂಭಂದಿ ದೊಡ್ಡ ಅರಸಿಕೆರೆಯ ಅಕ್ಷಯ್ ಸುಮಲತ ಅವರು ಚುನಾವಣೆಗೆ ನಿಲ್ಲುವುದಾಗಿ ಹೇಳಿದಾಗಲೆ ಸುಮಲತಾ ಅವರ ಗೆಲುವಿಗಾಗಿ ಕೇಶಮುಂಡನೆ ಮಾಡಿಸುವಯದಾಗಿ ಹರಕೆ ಹೊತ್ತದ್ದರು‌.ಈಗ ಮಂಡ್ಯ ಸುಮಲತಾ ಅಂಬರೀಶ್ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಪ್ರಚಂಡ ಜಯ ಸಾಧಿಸಿದ್ದು.ಅಕ್ಷಯು ಇಂದು ಮಂಡ್ಯದಿಂದ ಅಂಬರೀಶ್ ಅವತ ಸಮಾದಿ ಬಳಿ ಬಂದು ಅಂಬಿ ಸಮಾದಿಗೆ ಪೂಜೆ ಮಾಡಿ ಕೇಶ ಮುಂಡನೆ ಮಾಡಿಸಿದ್ದಾರೆ.

Conclusion: ಇನ್ನೂ ಬಿ ಎಸ್ ಸಿ ಪದವಿ ವ್ಯಾಸಂಗ ಮಾಡುತ್ತಿರುವ ಅಕ್ಷಯ್ ಮನೆಯಲ್ಲಿ ಎಷ್ಟೆ ಬಲವಂತ ಮಾಡಿದರು ಸಹ ಹೇರ್ ಕಟ್ ಮಾಡಿಸದೆ ಸುಮಲತಾ ಅವರು ಗೆದ್ದ ನಂತರ ಕೇಶ ಮುಂಡನೆ ಮಾಡಿಸಿದ್ದಾರೆ.ಇನ್ನೂ ಹರಕೆ ವಿಚಾರ ಸುಮಲತಾ ಅಂಬರೀಶ್ ಅವರಿಗೆ ಗೊತ್ತಿಲ್ಲ ಎಂದು ಅಕ್ಷಯ್ ಅವರ ಮನೆಯವರು ತಿಳಿಸಿದ್ರು.ಅಲ್ಲದೆ ಮಂಡ್ಯದಲ್ಲಿ ಸುಮಲತಾ ಅವರಿಗೆ ಗೆಲುವಿಗೆ ಕಾರಣಕರ್ತರಾದ ಮಂಡ್ಯದ ಜನತೆಗೆ ಅಕ್ಷಯ್ ಧನ್ಯವಾದ ತಿಳಿಸಿದ್ರು.

ಸತೀಶ್ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.