ETV Bharat / state

ರಾಹುಲ್ ಗಾಂಧಿ ಪಾದಯಾತ್ರೆ ಎರಡು ದಿನ ಮೊಟಕು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮೈಸೂರಿನ ಮೂಲಕ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದೆ.

ರಾಹುಲ್ ಗಾಂಧಿ ಪಾದಯಾತ್ರೆ
ರಾಹುಲ್ ಗಾಂಧಿ ಪಾದಯಾತ್ರೆ
author img

By

Published : Oct 3, 2022, 9:32 PM IST

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಭಾರತ್ ಜೋಡೋ ಯಾತ್ರೆ ನಿಗದಿಯಾಗಿತ್ತು. ಆದರೆ, ಸೋನಿಯಾ ಗಾಂಧಿ ಅವರು ಮಡಿಕೇರಿಯಲ್ಲಿ ವಾಸ್ತವ್ಯ ಇರುವುದರಿಂದ ಎರಡು ದಿನಗಳ ಕಾಲ ಯಾತ್ರೆಯನ್ನು ಮೊಟಕುಗೊಳಿಸಲಾಗಿದೆ.

ರಾಹುಲ್ ಗಾಂಧಿ ಪಾದಯಾತ್ರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮೈಸೂರಿನ ಮೂಲಕ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿ ತಾರಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ರಾಹುಲ್ ಗಾಂಧಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ನಂತರ ಅಲ್ಲಿಂದ ನಡೆದ ಯಾತ್ರೆಯು ಸುಮಾರು 6 ಕಿ ಮೀ ವರೆಗೆ ನಡೆಯಿತು. ನಂತರ ನಿಗದಿಯಂತೆ ಯಾತ್ರೆ ನಡೆಯದೇ ರಾಹುಲ್ ಗಾಂಧಿಯವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಮೈಸೂರಿಗೆ ಹೊರಟರು. ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಮತ್ತೆ ಶ್ರೀರಂಗಪಟ್ಟಣಕ್ಕೆ ಬಂದು ಯಾತ್ರೆಯಲ್ಲಿ ಪಾಲ್ಗೊಂಡರು.

ಕಾಂಗ್ರೆಸ್​ನ ಅಧ್ಯಕ್ಷ ಹುದ್ದೆಗೆ ಚುನಾವಣೆ: ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಎರಡು ದಿನಗಳ ಕಾಲ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಲಿದ್ದು, ದೆಹಲಿಯ ರಾಜಕಾರಣ ಈಗ ರಾಜಕೀಯ ಬಂದು ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್​ನ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿದ್ದು ಕರ್ನಾಟಕದಲ್ಲಿ ಈಗ ಚುನಾವಣಾ ಕಣ ರಂಗೇರಿದೆ.

ಅಭಿಮಾನಿ ಎದೆಯಲ್ಲಿ ರಾಹುಲ್​ಗಾಂಧಿ ಹಚ್ಚೆ : ಇನ್ನು ರಾಹುಲ್ ಗಾಂಧಿಯವರ ಯಾತ್ರೆಯ ವಿಶೇಷತೆಗಳನ್ನು ಗಮನಿಸುವುದಾದರೆ ಅಭಿಮಾನಿ ಒಬ್ಬ ರಾಹುಲ್ ಗಾಂಧಿಗೆ ನೀಡಲು ಟಗರು ಮರಿಯೊಂದನ್ನು ತಂದಿದ್ದರು. ಮತ್ತೊಬ್ಬ ಅಭಿಮಾನಿ ರಾಹುಲ್ ಗಾಂಧಿಯವರ ಹಚ್ಚೆ ಹಾಕಿಸಿಕೊಂಡು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಅಭಿಮಾನಿ ಎದೆಯಲ್ಲಿ ರಾಹುಲ್​ಗಾಂಧಿ ಹಚ್ಚೆ

ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಅ. 4 ಮತ್ತು 5 ರಂದು ಭಾರತ ಜೋಡೋ ಯಾತ್ರೆಗೆ ಬಿಡುವು ಇರಲಿದ್ದು, ಅ. 6 ರಂದು ಪಾಂಡವಪುರದಿಂದ ಮತ್ತೆ ಪ್ರಾರಂಭವಾಗುವ ಯಾತ್ರೆಯಲ್ಲಿ ಸೋನಿಯಾಗಾಂಧಿ ಹಾಗೂ ಅವರ ಪುತ್ರಿ ಪ್ರಿಯಾಂಕ ಗಾಂಧಿ ಅವರು ರಾಹುಲ್ ಗಾಂಧಿ ಅವರ ಜೊತೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಕಾಂಗ್ರೆಸ್​ನ ಮೂಲಗಳು ತಿಳಿಸಿವೆ.

ಓದಿ: ಅಧಿಕಾರದಲ್ಲಿದ್ದಾಗ ಏನೂ ಮಾಡದೇ ಈಗ ರೈತರ ಹೆಸರಲ್ಲಿ ಬೀದಿ ನಾಟಕ: ರಾಗಾಗೆ ತಿವಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.