ಮಂಡ್ಯ: ಖ್ಯಾತ ಚಲನಚಿತ್ರ ನಟಿ ರಚಿತಾರಾಮ್ ಅವರು ಮೇಲುಕೋಟೆಗೆ ಭೇಟಿ ನೀಡಿ ತಮ್ಮ ಮನೆ ದೇವರಾದ ಶ್ರೀಚಲುವನಾರಾಯಣಸ್ವಾಮಿ ದರ್ಶನ ಪಡೆದು ವಿಶೇಷಪೂಜೆ ಸಲ್ಲಿಸಿದರು.
ಭಕ್ತಿಯಿಂದ ಹಣೆಗೆ ಮೂರುನಾಮ ಧರಿಸಿ ಸ್ವಾಮಿಯ ದರ್ಶನಕ್ಕೆ ಆಗಮಿಸಿದ ನಟಿ ದೇವರ ದರ್ಶನ ಪಡೆದರು. ಪ್ರತಿವರ್ಷ ತಪ್ಪದೇ ಮೇಲುಕೋಟೆಗೆ ಆಗಮಿಸಿ ಶ್ರೀಚಲುವ ನಾರಾಯಣಸ್ವಾಮಿಯ ದರ್ಶನ ಪಡೆಯುವ ರಚಿತಾರಾಮ್ ಈ ವರ್ಷವೂ ಸ್ವಾಮಿಯ ದರ್ಶನ ಪಡೆದು ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ನಾಮಧರಿಸಿದ ಫೋಟೋವನ್ನು ಫೇಸ್‌ಬುಕ್ ಪೇಜ್ ಮೂಲಕ ಹಂಚಿಕೊಳ್ಳುವ ಮೂಲಕ ನಟಿ ನಾಮಧರಿಸುವ ಮಹತ್ವವನ್ನು ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ.