ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶಕ್ಕೆ ಜಿಲ್ಲೆಯ ರೈತರು ಸ್ವಾಗತ ಕೋರಿದ್ದಾರೆ. ಮಳೆ ಬಂದರೆ ನೀರು ಬಿಡಿ ಎಂಬ ಆದೇಶ ರೈತರಿಗೆ ಸಂತಸ ತಂದಿದೆ. ಆದರೆ ನಾಲೆಗಳಿಗೆ ಕೆ.ಆರ್.ಎಸ್‌ನಿಂದ ನೀರು ಬಿಡದೇ ಇರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಹೌದು, ಕಳೆದ ಐದು ದಿನಗಳಿಂದ ರೈತರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಕಾವೇರಿ ನೀರಾವರಿ ನಿಗಮದ ಎದುರು ಹೋರಾಟ ಶುರು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ನಿರ್ವಹಣಾ ಮಂಡಳಿಯತ್ತ ಬೆಟ್ಟು ತೋರಿಸಿ ನೀರು ಬಿಡಲು ಆಗೋದಿಲ್ಲ ಎಂದು ಹೇಳಿತ್ತು. ಇದರಿಂದ ರೈತರು ಆಹೋ ರಾತ್ರಿ ಹೋರಾಟವನ್ನು ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಸುತ್ತಿದ್ದಾರೆ.
ನಿರ್ವಹಣಾ ಮಂಡಳಿಯ ಆದೇಶವನ್ನು ಸ್ವಾಗತ ಮಾಡಿರುವ ಹೋರಾಟಗಾರರು, ಈಗಲಾದರೂ ಸರ್ಕಾರ ರೈತರ ಬೆಳೆ ರಕ್ಷಣೆ, ಜಾನುವಾರುಗಳ ಕುಡಿಯೋ ನೀರಿಗಾಗಿ ಕೆ.ಆರ್.ಎಸ್‌ನಿಂದ ನೀರು ಬಿಡಬೇಕು ಎಂದು ಒತ್ತಾಯ ಮಾಡಿ ಹೋರಾಟ ಮಾಡುತ್ತಿದ್ದಾರೆ. ನೀರು ಬಿಡುವವರೆಗೂ ಹೋರಾಟ ನಿಲ್ಲಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.