ಮಂಡ್ಯ: ಸಂವಿಧಾನ ಶಿಲ್ಪಿ ವಿಚಾರವಾಗಿ ಚರ್ಚೆ ಶುರುವಾದ ಸಂದರ್ಭದಲ್ಲಿಯೇ ಅಂಬೇಡ್ಕರ್ ಭಾವಚಿತ್ರವನ್ನು ಕಸದ ರಾಶಿಗೆ ಸೇರಿಸಿದ ಘಟನೆ ಮೇಲುಕೋಟೆ ಕ್ಷೇತ್ರದ ಎಂಎಲ್‌ಎ ಕಚೇರಿಯಲ್ಲಿ ನಡೆದಿದೆ.
ಪಾಂಡವಪುರದಲ್ಲಿರುವ ಶಾಸಕರ ಕಚೇರಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಕಚೇರಿಯಲ್ಲಿದ್ದ ಭಾವಚಿತ್ರವನ್ನು ಕಸದ ರಾಶಿಗೆ ಹಾಕಲಾಗಿದೆ. ಉಪವಿಭಾಗಾಧಿಕಾರಿ ಕಚೇರಿಯ ಕಟ್ಟಡದಲ್ಲಿ ಶಾಸಕರ ಕಚೇರಿ ಇದ್ದು, ಈ ಕಚೇರಿಯ ನವೀಕರಣ ಕಾರ್ಯ ನಡೆಯುತ್ತಿದೆ.
ಈ ರೀತಿ ಬಿಸಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.