ETV Bharat / state

ಟ್ರಾಫಿಕ್ ರೂಲ್ಸ್ ನೆಪದಲ್ಲಿ ಟ್ರಾಫಿಕ್​​ ಪೊಲೀಸ್ ಮಾನವೀಯತೆ ಮರೆತ ಆರೋಪ: ಮಹಿಳೆ ಅಸ್ವಸ್ಥ - Young man speak badly about police in Mandya

ಮಂಡ್ಯ ನಗರದ ಪೊಲೀಸರಿಂದ ಅಮಾನವೀಯ ನಡೆಯೊಂದು ನಡೆದಿದೆ. ದಂಡ ಕಟ್ಟುತ್ತೇನೆ ಎಂದು ಯುವಕ ಹೇಳಿದರು ಸಹ ಟ್ರಾಫಿಕ್​​ ಪೊಲೀಸರೊಬ್ಬರು ಬೈಕ್ ಕೀ ಕಿತ್ತುಕೊಂಡು ಆತನನ್ನು ಸತಾಯಿಸಿದ ಆರೋಪ ಕೇಳಿಬಂದಿದೆ. ಈ ಮಧ್ಯೆ ಯುವಕನ ತಾಯಿ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಪೊಲೀಸ್​ನನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾನೆ.

Humanity Forgot by the Traffic Police in the name of Traffic Rules
ಟ್ರಾಫಿಕ್ ರೂಲ್ಸ್ ನೆಪದಲ್ಲಿ ಮಾನವೀಯತೆ ಮರೆತ ಟ್ರಾಫಿಕ್​​ ಪೊಲೀಸ್
author img

By

Published : Jan 20, 2022, 4:31 PM IST

ಮಂಡ್ಯ: ಜಿಲ್ಲೆಯ ಸಂಜಯ್​​ ವೃತ್ತದಲ್ಲಿ ಯುವಕನೋರ್ವ ಟ್ರಾಫಿಕ್​​ ಪೊಲೀಸರೊಬ್ಬರನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ನಡೆದಿದೆ. ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗನೂರು ಯುವಕ ವಿನೋದ್ ತಾಯಿಯೊಂದಿಗೆ ಬೈಕ್​ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿರುವ ಟ್ರಾಫಿಕ್​​ ಪೊಲೀಸ್,​​ ಹೆಲ್ಮೆಟ್ ಧರಿಸದ ಕಾರಣ ದಂಡ ವಿಧಿಸಿದ್ದಾರೆ. ಈ ವೇಳೆ ಘಟನೆ ನಡೆದಿದೆ.

ಎಷ್ಟೂ ಬೇಕಾದರು ದಂಡ ಕಟ್ಟುತ್ತೇನೆ ಎಂದು ಯುವಕ ಹೇಳಿದರೂ ಸಹ ಆ ಪೊಲೀಸ್​​ ಬೈಕ್ ಕೀ ಕಿತ್ತುಕೊಂಡು, ಯುವಕ ವಿನೋದ್​​ನ​ನ್ನು ಸತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ ಯುವಕನ ತಾಯಿ ಅಸ್ವಸ್ಥರಾಗಿ, ಬೈಕ್​ನಿಂದ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಯುವಕ ಸಹನೆ ಕಳೆದುಕೊಂಡಿದ್ದು, ಪೊಲೀಸ್ ಅನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಆಗ ಬೈಕ್ ಸವಾರ ಹಾಗು ಪೊಲೀಸ್ ನಡುವೆ ಮಾತಿನ ಚಕಮಕಿ ನಡೆದಿದೆ.

ಟ್ರಾಫಿಕ್ ರೂಲ್ಸ್ ನೆಪದಲ್ಲಿ ಮಾನವೀಯತೆ ಮರೆತ ಟ್ರಾಫಿಕ್​​ ಪೊಲೀಸ್

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಪೊಲೀಸರ ದುರ್ವರ್ತನೆ ಹೆಚ್ಚಾಗುತ್ತಿದ್ದು, 2 ದಿನಗಳ ಹಿಂದೆ ಇದೇ ರೀತಿ ಅನಾರೋಗ್ಯದ ತಂದೆಯನ್ನು ಕೂರಿಸಿಕೊಂಡು ಹೋಗುತ್ತಿದ್ದ ಮಗನನ್ನು ಹಿಡಿದು ದಂಡ ವಸೂಲಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮತ್ತೆ ಅದೇ ರೀತಿಯ ಪ್ರಕರಣ ನಡೆದಿದೆ.

ಇದನ್ನೂ ಓದಿ: ನಾಳೆ ಮಧ್ಯಾಹ್ನ 1 ಗಂಟೆಗೆ ಕೋವಿಡ್ ಸಭೆ ಫಿಕ್ಸ್: ವೀಕೆಂಡ್ ಕರ್ಫ್ಯೂ ಭವಿಷ್ಯ ನಿರ್ಧಾರ?

ಟ್ರಾಫಿಕ್ ರೂಲ್ಸ್ ನೆಪದಲ್ಲಿ ಮಾನವೀಯತೆ ಮರೆತ ಟ್ರಾಫಿಕ್​​ ಪೊಲೀಸ್​​ನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಅಸ್ವಸ್ಥಗೊಂಡ ಯುವಕನ ತಾಯಿಯನ್ನು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.