ಮಂಡ್ಯ: ಪಿತೃ ಪಕ್ಷದ ಕೊರೊನಾ ಭಯವನ್ನು ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ದೂರ ಮಾಡಿದೆ. ಪಿತೃಗಳಿಗೆ ತರ್ಪಣ ಕೊಡುವ ಹೊಸ ಆಲೋಚನೆಯೊಂದಿಗೆ ಆನ್‌ಲೈನ್ ಪೂಜೆ ಆರಂಭಿಸಿದೆ.
ಅಗಲಿದ ಪಿತೃಗಳಿಗೆ ಕಾವೇರಿ ದಂಡೆಯಲ್ಲಿ ತರ್ಪಣ ನೀಡಿ ಪಿಂಡಪ್ರದಾನ ಮಾಡಲಾಗುತ್ತಿತ್ತು. ಆದರೆ ಕೊರೊನಾ ಇದಕ್ಕೆಲ್ಲ ಬ್ರೇಕ್ ಹಾಕಿದೆ. ಹೀಗಾಗಿ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಹಾಗೂ ಪುರೋಹಿತರಾದ ಡಾ. ಭಾನುಪ್ರಕಾಶ್ ಶರ್ಮಾ ತಮ್ಮ 30 ಜನ ಶಿಷ್ಯರ ಜೊತೆಗೂಡಿ ಆನ್‌ಲೈನ್ ಮೂಲಕ ಶ್ರಾದ್ಧ ಕಾರ್ಯ ಮಾಡಿಸುತ್ತಿದ್ದಾರೆ.
ಪೂಜಾ ವಿಧಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಬರಲಾಗದವರು ಆನ್‌ಲೈನ್ ಮೂಲಕವೇ ಪೂಜೆ ಮಾಡಿಸಿ ಅಗಲಿದ ತಮ್ಮ ಪಿತೃಗಳಿಗೆ ಸದ್ಗತಿ ಕೋರಿದ್ದಾರೆ. ಆನ್‌ಲೈನ್ ಮೂಲಕ ಪೂಜೆ ಮಾಡಿಸುವವರ ಮಾಹಿತಿ ಪಡೆದು ಪಿಂಡಪ್ರದಾನ , ತಿಲತರ್ಪಣ, ನಾರಾಯಣ ಬಲಿಯಂತಹ ಪೂಜೆ ನೆರವೇರಿಸಲಾಗುತ್ತಿದೆ. ಮನೆಯಲ್ಲಿಯೇ ಕುಳಿತು ಈ ಪೂಜೆಯಲ್ಲಿ ಭಾಗಿಯಾಗಿಬಹುದಾಗಿದೆ.