ಮಂಡ್ಯ: ಕರ್ತವ್ಯದ ಮೇಲೆ ಮಳವಳ್ಳಿ ತಾಲೂಕಿನ ಧನಗೂರಿಗೆ ಹೋಗಿದ್ದಾಗ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿರುವುದನ್ನು ಪ್ರಶ್ನಿಸಿದ ಸೆಸ್ಕಾಂ ನೌಕರನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಪ್ರತಾಪ್ ಮೇಲೆ ಧನಗೂರಿನ ಸಿದ್ದಶೆಟ್ಟಿ, ಮಹದೇವಸ್ವಾಮಿ, ನಾಗರಾಜು, ಸಿದ್ದರಾಜು, ರಾಮು ಎಂಬವರು ಹಲ್ಲೆ ನಡೆಸಿದ್ದಾರೆ. ಹಲಗೂರು ಆಸ್ಪತ್ರೆಯಲ್ಲಿ ಪ್ರತಾಪ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.